Site icon Suddi Belthangady

ಕೊಕ್ಕಡ: ಸಂತ ಜೋನರ ಬ್ಯಾಪ್ಟಿಸ್ತರ ದೇವಾಲಯದಲ್ಲಿ “ಗದ್ಯಾಂತ್ ಏಕ್ ದೀಸ್ ” ಕಾರ್ಯಕ್ರಮ

ಕೊಕ್ಕಡ: ಸಂತ ಜೋನರ ಬ್ಯಾಪ್ಟಿಸ್ತರ ದೇವಾಲಯದಲ್ಲಿ ಕೊಕ್ಕಡ ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ (lCYM) ಘಟಕವು ಸೆ.06 ರಂದು “ಗದ್ಯಾಂತ್ ಏಕ್ ದೀಸ್ ” ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಕ್ಕಡ ದೇವಾಲಯದ ಧರ್ಮಗುರು ಅನಿಲ್ ಪ್ರಕಾಶ್ ಡಿಸಿಲ್ವ ಕಾರ್ಯಕ್ರರ್ಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮವನ್ನು ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮಗುರು ಗ್ರೇಶನ್ ಅಲ್ವಾರಿಸ್ ರವರು ಉದ್ಘಾಟಿಸಿ, ಶುಭ ಹಾರೈಸಿದರು.

ವೇದಿಕೆಯಲ್ಲಿ ಕೊಕ್ಕಡ ದೇವಾಲಯದ ಧರ್ಮಗುರು ಫಾ|| ಅನಿಲ್ ಪ್ರಕಾಶ್ ಡಿಸಿಲ್ವ, ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮಗುರು ಫಾ|| ಗ್ರೇಶನ್ ಅಲ್ವಾರಿಸ್, ಸಿ II ಸ್ಟ್ರೆಲ್ಲಾ, ಸಿII ಜಾಕಲಿನ್, ಚರ್ಚ್ ನ ಉಪಾಧ್ಯಕ್ಷ ನೋಯೆಲ್ ಮೊಂತೇರೊ, ಕಾರ್ಯದರ್ಶಿ ವೀಣಾ ಮಸ್ಕರೇನಸ್ ಎಲ್ಲಾ ಆಯೋಗದ ಸಂಚಾಲಕಿ ವಿನ್ನಿಫ್ರೆಡ್ ಡಿಸೋಜ, ICYM ಘಟಕದ ಆನಿಮೇಟರ್ ಜಯಂತ್ ಡಿ’ಸೋಜ, ಅಧ್ಯಕ್ಷೆ ಸಹನಾ ಡಿ’ಸೋಜ, ಕಾರ್ಯದರ್ಶಿ ವಿನೀತ್ ಮೊಂತೆರೋ, ಕ್ರೀಡಾ ಕಾರ್ಯದರ್ಶಿ ಜಾನ್ಸನ್ ಪಾಯ್ಸ್, ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಡಿ’ಸೋಜ ಉಪಸ್ಥಿತರಿದ್ದರು.

ಸೃಜನಾತ್ಮಕ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ದೇವಾಲಯದ 6 ವಾಳ್ಯದ ಸದಸ್ಯರು ನಡೆಸಿದ ಪಥ ಸಂಚಲನವು ಎಲ್ಲರನ್ನು ಆಕರ್ಷಿಸಿತು. ICYM ಸದಸ್ಯರಿಂದ ಪ್ರಾರ್ಥನೆ, ಅಧ್ಯಕ್ಷೆ ಸಹನಾ ಡಿ’ಸೋಜ ಅವರು ಸಭೆಯನ್ನು ಸ್ವಾಗತಿಸಿ, ಕಾರ್ಯದರ್ಶಿ ವಿನೀತ್ ಮೊಂತೇರೊ ಧನ್ಯವಾದಿಸಿದರು. ಸಭಾ ಕಾರ್ಯಕ್ರಮವನ್ನು ವಿಲ್ಸಿಟಾ ಮೊಂತೇರೊ ನಿರೂಪಿಸಿದರು. ಎಲ್ಲಾ ಸ್ಪರ್ಧೆಗಳನ್ನು ICYM ಸಂಘಟಣೆಯು ನೆರವೇರಿಸಿ ಸಂಘಟಿಸಿತು. ಕಾರ್ಯಕ್ರಮದ ಹಿತಚಿಂತಕರನ್ನು ಗುರುತಿಸಿ ಅವರ ಕೊಡುಗೆಗಾಗಿ ಗೌರವಿಸಲಾಯಿತು.

Exit mobile version