Site icon Suddi Belthangady

ಬದನಾಜೆ: 46ನೇ ವರ್ಷದ ಶಾರದಾ ಪೂಜೆ

ಉಜಿರೆ:ಮಾಚಾರು ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂದಿರದಲ್ಲಿ ಭಜನಾ ಮಂಡಳಿ ಮತ್ತು ಪ್ರಗತಿ ಯುವಕ ಮಂಡಲ ಹಾಗೂ ಯುವತಿ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ 46ನೇ ವರ್ಷದ ಶ್ರೀ ಶಾರದಾ ಪೂಜಾ ಕಾರ್ಯಕ್ರಮ ಅ.10 ರಂದು ಜರುಗಿತು.

ಬೆಳಗ್ಗೆ ಕಾರ್ಯಕ್ರಮವನ್ನು ಉಜಿರೆಯ ಶಾರದಾ ಶೋ ರೂಮ್ ಮಾಲಕ ಹುಕುಮ್ ರಾಮ್ ಪಟೇಲ್ ಉದ್ಘಾಟಿಸಿದರು.

ನಂತರ ಸಂಜೆವರೆಗೆ ನಿರಂತರವಾಗಿ ಶ್ರೀ ಶಿವ ಪಾರ್ವತಿ ಭಜನಾ ಮಂಡಳಿ ಚಾಮುಂಡಿ ಬೆಟ್ಟ ಓಡಲ, ಬದನಾಜೆ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಮತ್ತು ಶ್ರೀ ಮಹಮ್ಮಾಯಿ ಭಜನಾ ಮಂಡಳಿಯ ಸದಸ್ಯರಿಂದ ಏಕಾಹ ಭಜನೆ ನಡೆಯಿತು. ಮಹಿಳೆಯರಿಗೆ ಹೂ ಮಾಲೆ ಕಟ್ಟಿ ತರುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸಂಜೆ ಮಹಾಪೂಜೆ ಸಂದರ್ಭದಲ್ಲಿ ಊರಿನ ಸಾಧಕ ಚಿಕ್ಕಮಗಳೂರು ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ ಪುರಸ್ಕೃತ ಶಿವರಾಮ್ ಗೌಡ ಪರಂಗಾಜೆ, ಬದನಾಜೆ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸಿ ನಂತರ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ರಾಜೇಶ್ವರಿ ಬಿ.ಎಸ್., ಮಕ್ಕಳಿಗೆ ಭಜನೆ ಕಲಿಸಿಕೊಡುತ್ತಿರುವ ಮಂಡಳಿಯ ಉಪಾಧ್ಯಕ್ಷೆ ಸೌಮ್ಯ ರಾವ್ ಕಟ್ಟದಬೈಲು ಹಾಗೂ ಭಜನಾ ಮಂದಿರ ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ನಿಂದ ಅನುದಾನ ಒದಗಿಸಿದ ಸದಸ್ಯ ಗುರುಪ್ರಸಾದ್ ಕೋಟ್ಯಾನ್ ರವರನ್ನು ಸನ್ಮಾನಿಸಲಾಯಿತು.

ಭಜನಾ ಮಂಡಳಿ, ಯುವಕ ಮತ್ತು ಯುವತಿ ಮಂಡಲದ ಪದಾಧಿಕಾರಿಗಳು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ರಾತ್ರಿ ಮಹಾಪೂಜೆಯ ನಂತರ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

Exit mobile version