Site icon Suddi Belthangady

ಮಡಂತ್ಯಾರು: ಮಿತ್ರಾ ವ್ಹೀಲ್ ಮಾಸ್ಟರ್ ಶುಭಾರಂಭ

ಮಡಂತ್ಯಾರು: ಮಡಂತ್ಯಾರು ಪೇಟೆಯ ಮುಖ್ಯ ರಸ್ತೆಯ ಕಲಾ ಸಭಾಂಗಣ ಮುಂಭಾಗದಲ್ಲಿ ಮಿತ್ರಾ ವ್ಹೀಲ್ ಮಾಸ್ಟರ್ ಶಾಪ್ ಅ.10ರಂದು ಶುಭಾರಂಭಗೊಂಡಿತು. ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಟಿ.ವಿ.ಶ್ರೀಧರ್ ರಾವ್ ವೈದಿಕ ವಿಧಿವಿಧಾನಗಳನ್ನು ನೇರವೇರಿಸಿ, ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಫಾ.ವಂ.ಸ್ಟಾನಿ ಗೋವಿಯಾಸ್, ಬಳ್ಳಮಂಜ ಅನಂತೇಶ್ವರ ದೇವಾಸ್ಥಾನದ ಆಡಳಿತ ಸಮಿತಿಯ ಹರ್ಷ ಸಂಪಿಗೆತ್ತಾಯ, ಹಿರಿಯರಾದ ಮುತ್ತಣ್ಣ ಪೂಂಜ ಗರ್ಡಾಡಿ, ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೋಕ್ತೆಸರ ವಿಠಲ್ ಶೆಟ್ಟಿ ಮೂಡಯೂರು, ಉದ್ಯಮಿ ಯೋಗೀಶ್ ಕಡ್ತಿಲ, ಕಟ್ಟಡ ಮಾಲಕಿ ಅನಿತಾ ಕೊರೆಯ , ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಬೆಟ್ಟು, ಭಾಜಪಾ ಮಂಡಲ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಪಿಡಿಓ ನಾಗೇಶ್, ಪ್ರಮುಖರಾದ ಸದಾನಂದ ಪೂಜಾರಿ, ಮಾಲಕಿ ಶೋಭಾ ಗಂಗಾಧರ ಮಿತ್ರ, ಹೇಮಂತ್ ಶೆಟ್ಟಿ, ವರುಣ್ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Exit mobile version