Site icon Suddi Belthangady

ಬಪ್ಪನಾಡು: ಸಾಮೂಹಿಕ ಯೋಗ ದುರ್ಗಾ ನಮಸ್ಕಾರ- ಗುರುವಾಯನಕೆರೆಯ ಯೋಗಾರ್ಥಿಗಳು ಭಾಗಿ

ಬೆಳ್ತಂಗಡಿ: ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನ ಕೇಂದ್ರ ತುಮಕೂರು ಇದರ ಸಹಯೋಗದೊಂದಿಗೆ ಅ.6ರಂದು ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಹಾಗೂ ಮಹಾಲಕ್ಷ್ಮಟಕಂ ಸ್ತೋತ್ರ ಪಠಣ ಹಾಗೂ ಪುಷ್ಪಾರ್ಚನೆ ನಡೆಯಿತು.

ಕಾರ್ಯಕ್ರಮದಲ್ಲಿ ನಮ್ಮ ಮನೆ ಹವ್ಯಕ ಭವನ ಗುರುವಾಯನಕೆರೆ ಶಾಖೆಯ 79 ಯೋಗಬಂಧುಗಳು ಭಾಗವಹಿಸಿದ್ದರು.

Exit mobile version