Site icon Suddi Belthangady

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಯಿಂದ ಕೊಯ್ಯೂರಿನ ಯುವಕನಿಗೆ ವಂಚನೆ

ಕೊಯ್ಯೂರು: ಅಪರಿಚಿತ ವ್ಯಕ್ತಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೊಯ್ಯೂರು ಮಲೆಬೆಟ್ಟು ನಿವಾಸಿ ಅಮೃತೇಶ್‌ರಿಗೆ ವಂಚನೆ ಮಾಡಿದ ಘಟನೆ ಅ.5ರಂದು ನಡೆದಿದೆ.

ಟೆಲಿಗ್ರಾಂ ಆಪ್ ಮೂಲಕ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಸುಮಾರು ರೂ.19.90 ಲಕ್ಷ ವಂಚಿಸಿದ ಪ್ರಕರಣವು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲೆಯಾಗಿದೆ.

ಸೆ.29ರಂದು ಮಲೆಬೆಟ್ಟು ಕೋಡಿಮಾರ್ ನಿವಾಸಿ ಅಮೃತೇಶ್ ಕುಮಾರ್ ಎ ರವರು ಟೆಲಿಗ್ರಾಂ ಆಪ್ ಮೂಲಕ ಪರಿಚಯವಾದ ಯಾರೋ ಅಪರಿಚಿತರು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನೀಡುವುದಾಗಿ ಅವರ ಮೊತ್ತ ಮೊಬೈಲ್‌ನಲ್ಲಿದ್ದ ಟೆಲಿಗ್ರಾಂ ಅಪ್ಲಿಕೇಶನ್‌ಗೆ ಯಾರೋ ಅಪಚಿರಿತರು ವೆಬ್ ಸೈಟ್ ಲಿಂಕನ್ನು ಕಳುಹಿಸಿ ನೊಂದಾಯಿಸಿಕೊಂಡು ಆನ್‌ಲೈನ್ ವಸ್ತುಗಳನ್ನು ಉತ್ತೇಜಿಸಿದಲ್ಲಿ ಸಂಬಳದ ರೂಪದಲ್ಲಿ ಖಾತೆಗೆ ಹಣ ಜಮಾ ಮಾಡಲಾಗುವುದೆಂದು ತಿಳಿಸಿದಂತೆ, ಅಮೃತೇಶ್ ಕುಮಾರ್‌ರವರು ವಂಚಕರ ಮಾರ್ಗದರ್ಶನದಂತೆ ಸದ್ರಿ ಲಿಂಕನ್ನು ಓಪನ್ ಮಾಡಿ ನೊಂದಾಯಿಸಿಕೊಂಡು ಅವರು ನೀಡಿರುವ ಟಾಸ್ಕನ್ನು ಮುಕ್ತಾಯಗೊಳಿಸಲು ಠೇವಣಿ ರೂಪದಲ್ಲಿ ಹಣ ಸಂದಾಯ ಮಾಡಬೇಕಾಗಿ ಮತ್ತು ಬೋನಸ್ ಪಡೆಯಲು ಠೇವಣಿ ಹಣವನ್ನು ಮತ್ತೆ ಮತ್ತೆ ಪಾವತಿಸಲು ತಿಳಿಸಿದಂತೆ ಅಮೃತೇಶ್ ಕುಮಾರ್ ಅವರ ವಿವಿಧ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯ ವಿವಿಧ ಬ್ಯಾಂಕ್ ಖಾತೆಗೆ ಒಟ್ಟು 19,90,442 ರೂ ಹಣವನ್ನು ಹಂತ-ಹಂತವಾಗಿ ವರ್ಗಾಯಿಸಿದ್ದು ಜಮಾ ಮಾಡಿದ ಹಣವನ್ನು ವಾಪಾಸ್ಸು ನೀಡದೇ ನಂಬಿಸಿ ಮೋಸ ಮಾಡಿ ವಂಚಿಸಿದ್ದು ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಅಪರಿಚಿತರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Exit mobile version