Site icon Suddi Belthangady

ಉಜಿರೆ: ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು ವಾರ್ಷಿಕೋತ್ಸವ

ಉಜಿರೆ: ಉಜಿರೆ ಶ್ರೀ ಧ.ಮ.ಪಾಲಿಟೆಕ್ನಿಕ್  ಕಾಲೇಜು ವಾರ್ಷಿಕೋತ್ಸವ ಅ.8ರಂದು ಪಾಲಿಟೆಕ್ನಿಕ್ ಕಾಲೇಜು ಸೆಮಿನಾರ್ ಹಾಲ್ ನಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಧ.ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು ಟೆಲನ್ ಟ್ರೀ ಸಂಸ್ಥೆಯ ಸಿಇಒ ಜಗದೀಶ್ ಶೇಖರ್ ನಾಯ್ಕ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಸಂತೋಷ್ ವರದಿ ವಾಚಿಸಿದರು.ಪಾಲಿಟೆಕ್ನಿಕ್  ಕಾಲೇಜು ಮೆನೇಜರ್ ಚಂದ್ರನಾಥ್ ಜೈನ್, ಉಪನ್ಯಾಸಕರು ಸಹಕರಿಸಿದರು.

ಉಪನ್ಯಾಸಕ ಪ್ರವೀಣ್ ಸ್ವಾಗತಿಸಿದರು.ಉಪನ್ಯಾಸಕರಾದ ಶಂಕರ್ ಭಟ್, ರಿನಿತಾ ಫೆರ್ನಾಂಡಿಸ್ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಿತಿನ್ ವಂದಿಸಿದರು.

Exit mobile version