Site icon Suddi Belthangady

ವೇಣೂರು: ದೇವಾಡಿಗರ ಸೇವಾ ವೇದಿಕೆ ವತಿಯಿಂದ ಶಾರದಾ ಪೂಜೆ

ವೇಣೂರು: ದೇವಾಡಿಗರ ಸೇವಾ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಶರನ್ನವರಾತ್ರಿ ಪ್ರಯುಕ್ತ ದೇವಾಡಿಗ ಸಮುದಾಯ ಭವನದಲ್ಲಿ ಶ್ರೀ ಶಾರದಾ ಪೂಜೆಯು ಅ.6ರಂದು ನಡೆಯಿತು.

ಈ ಪೂಜಾ ಕಾರ್ಯಕ್ರಮದಲ್ಲಿ ದೇವಾಡಿಗ ಸೇವಾ ವೇದಿಕೆ ವೇಣೂರು ವಲಯದ ಹಿರಿಯರಾದ ಶೀನ ದೇವಾಡಿಗ, ವೇದಿಕೆಯ ಗೌರವಾಧ್ಯಕ್ಷ ಸುಂದರ ಎಂ ದೇವಾಡಿಗ, ಕಾರ್ಯದರ್ಶಿ ಗಣೇಶ ದೇವಾಡಿಗ, ವೇದಿಕೆಯ ಉಪಾಧ್ಯಕ್ಷ ದಯಾನಂದ ದೇವಾಡಿಗ, ದೇವಾಡಿಗರ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪಿ.ಎನ್, ಕೋಶಾಧಿಕಾರಿ ಹರಿಣಾಕ್ಷಿ ಉಪಸ್ಥಿತರಿದ್ದರು.

ಅಲ್ಲದೆ ಅನೇಕ ದೇವಾಡಿಗ ಸಮಾಜ ಬಾಂಧವರು ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು. ಭಜನಾ ಕಾರ್ಯಕ್ರಮ ನಡೆದು ಕೊನೆಗೆ ಪ್ರಸಾದ ವಿತರಣೆ ನಡೆಯಿತು.

Exit mobile version