ಗುರಿಪಳ್ಳ: ಉಜಿರೆಯಿಂದ ಗುರಿಪಳ್ಳ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ ಸ್ಥಳೀಯ ನಿವಾಸಿಯ ಕಾರು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಅ.7ರಂದು ನಡೆದಿದೆ.
ಕಾರು ಚಾಲಕನು ಉಜಿರೆಯಿಂದ ಗುರಿಪಳ್ಳ ಕಡೆಗೆ ಸಂಚಾರಿಸುತ್ತಿರುವ ವೇಳೆ ಕಾರಿನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಚಕ್ರ ಹೊಡೆದು ಹೋಗಿದ್ದು ಕಾರಿನ ಮುಂಭಾಗವು ಸಂಪೂರ್ಣ ಹಾನಿಯಾಗಿದೆ.ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.