Site icon Suddi Belthangady

ಗುರುವಾಯನಕೆರೆ: ಎಕ್ಸೆಲ್ ವಾಣಿಜ್ಯ ವಿಭಾಗದ ಮಕ್ಕಳಿಂದ ವಿಟ್ಲದ ಇಕೋ-ಬ್ಲಿಸ್ ಕೈಗಾರಿಕಾ ಘಟಕಕ್ಕೆ ಭೇಟಿ

ಗುರುವಾಯನಕೆರೆ: ಇಲ್ಲಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿರುವ ಎಕ್ಸೆಲ್ ಪದವಿ ಪೂರ್ವ ವಿದ್ಯಾ ಸಂಸ್ಥೆಯ ವಾಣಿಜ್ಯ ವಿಭಾಗದ ಮಕ್ಕಳು ವಿಟ್ಲದ ಮೂರ್ಕಜೆಯಲ್ಲಿರುವ ಇಕೋ-ಬ್ಲಿಸ್ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿದರು.

ಇಕೋ-ಬ್ಲಿಸ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿ.ಇ.ಓ ಆಗಿರತಕ್ಕಂತಹ ಶ್ರೀರಾಜಾರಾಂ ಬಲಿಪಗುಳಿ ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ, ಮನಸ್ಸಿನ ಇಚ್ಛಾಶಕ್ತಿಯಿಂದಲೇ ಒಬ್ಬ ವ್ಯಕ್ತಿ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರವಾದ ಬೆಳವಣಿಗೆ ಕಾಣಲು ಸಾಧ್ಯವಿದೆ. ಉದ್ಯೋಗವನ್ನು ಸೃಷ್ಠಿಸುವಲ್ಲಿ ನಾನಾ ಆಲೋಚನೆಗಳನ್ನು ಹೊಂದಲಾಯಿತು. ಪ್ರಸ್ತುತವಾಗಿ ಸ್ವತಂತ್ರ ಉದ್ಯಮಗಳಿಂದ ಸ್ಥಳೀಯವಾಗಿ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದರೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವದೇಶಿ ಉತ್ಪನ್ನಗಳು ಸದ್ದು ಮಾಡುತ್ತಿದೆ.

‘ಝೀರೋ ವೆಸ್ಟ್’ ಎಂಬ ಉದ್ದೇಶವನ್ನಿಟ್ಟುಕೊಂಡು ಮುಂದುವರಿದ ಈ ಸಂಸ್ಥೆಯು ಅಡಿಕೆ ಹಾಳೆಯಿಂದ ಸುಮಾರು ಅರವತ್ತು ವಿಧದ ವಸ್ತುಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ.ಇದೀಗ ಪ್ರಕೃತಿ ಪೂರಕವಾಗಿರುವ ವಸ್ತುಗಳನ್ನು ತಯಾರಿಸುವ ಹೊತ್ತಿಗೆ ಗ್ರಾಮೀಣ ಭಾಗದಲ್ಲಿ 450ಕ್ಕೂ ಹೆಚ್ಚಿನ ಜನರಿಗೆ ನೇರವಾಗಿ ಉದ್ಯೋಗ ನೀಡಲಾಗಿದೆ.ಇದರೊಂದಿಗೆ 1000 ಕ್ಕೂ ಅಧಿಕ ಮಂದಿಗೆ ಪರೋಕ್ಷವಾದ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿದೆ.ಇದರಿಂದ ಗ್ರಾಮಗಳ ಜನರ ಆದಾಯ, ಜೀವನಕ್ರಮವು ಸುಧಾರಿಸಿದೆ ಎಂದರು.

ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ., ವಿಭಾಗ ಮುಖ್ಯಸ್ಥರಾದ ಪ್ರಸನ್ನ, ರವಿ, ಎಕ್ಸೆಲ್ ಮೀಡಿಯಾ ನಿರ್ವಾಹಕ ರಂಜಿತ್, ಮತ್ತಿತರು ಭಾಗವಹಿಸಿದರು.

Exit mobile version