Site icon Suddi Belthangady

ಅಳಕ್ಕೆ: ಕತ್ತು ಕೊಯ್ದುಕೊಂಡು ವೃದ್ಧ ಸಾವು

ತಣ್ಣೀರುಪಂತ: ಕತ್ತು ಕೊಯ್ದುಕೊಂಡು ವೃದ್ಧರೊರ್ವರು ಮೃತಪಟ್ಟ ಘಟನೆ ತಣ್ಣೀರುಪಂತ ಗ್ರಾಮದ ಅಳಕ್ಕೆ ಎಂಬಲ್ಲಿ ಅ.5ರಂದು ನಡೆದಿದೆ.

ಮೃತಪಟ್ಟ ವ್ಯಕ್ತಿ ರಾಜೀವ ಪೂಜಾರಿ (72 ವರ್ಷ) ಎಂದು ಗುರುತಿಸಲಾಗಿದೆ.

ಮೃತಪಟ್ಟ ವ್ಯಕ್ತಿ ಮನೆಯ ಹಿಂಬಾಗಿಲಿನಲ್ಲಿ ಕತ್ತಿಯಿಂದ ಕುತ್ತಿಗೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಎನ್ನಲಾಗುತ್ತಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕರು, ಪುಂಜಾಲಕಟ್ಟೆ ಠಾಣೆಯ ಪೊಲೀಸರು ಹಾಗೂ ಸೀನ್ ಆಫ್ ಕ್ರೈಂ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Exit mobile version