Site icon Suddi Belthangady

ಉಜಿರೆ: ಕಾರ್ತಿಕ್ ಎಂಟರ್ ಪ್ರೈಸಸ್ ನಲ್ಲಿ ಮೇಘನಾ ಸ್ಟೀಲ್ ಗ್ರಾಹಕರ, ಕಾರ್ಮಿಕರ ಸಮಾವೇಶ

ಉಜಿರೆ: ಮೇಘನಾ ಟಿಎಂಟಿ ಸ್ಟೀಲ್ ಅಧಿಕೃತ ವಿತರಕ ಉಜಿರೆ ಕಾರ್ತಿಕ್ ಎಂಟರ್ ಪ್ರೈಸಸ್ ನಲ್ಲಿ ಮೇಘನಾ ಟಿಎಂಟಿ ಸ್ಟೀಲ್ ಗ್ರಾಹಕರ ಮತ್ತು ನುರಿತ ಕಾರ್ಮಿಕರ ಸಮಾವೇಶ ನಡೆಯಿತು.

ಮೇಘನಾ ಸ್ಟೀಲ್ ಮಾರ್ಕೆಟಿಂಗ್ ಎಕ್ಸ್ ಕ್ಯೂಟಿವ್ ಭಾಗವಹಿಸಿ ಮೇಘನಾ ಸ್ಟೀಲ್ ಉತ್ಪನ್ನ ಮತ್ತು ಇದರ ಗುಣಮಟ್ಟದ ಕುರಿತು ವಿವರ ನೀಡಿದರು.

ಉಜಿರೆ ಕಾರ್ತಿಕ್ ಎಂಟರ್ ಪ್ರೈಸಸ್ ಮಾಲಕ ಕೆ.ಧರ್ಮಣ್ಣ ಗೌಡ, ಮೇಘನಾ ಸ್ಟೀಲ್ ವಿಭಾಗ ಮೆನೇಜರ್ ಮೋಹನ್ ರಾವತ್ ಉಪಸ್ಥಿತರಿದ್ದರು.

ಗ್ರಾಹಕರು, ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಮಾಹಿತಿ ಪಡೆದುಕೊಂಡರು.

ಮೇಘನಾ ಸ್ಟೀಲ್ ಮಾರ್ಕೆಟಿಂಗ್ ವಿಭಾಗದ ನವೀನ್ ಸ್ವಾಗತಿಸಿ, ಕಾರ್ತಿಕ್ ಎಂಟರ್ ಪ್ರೈಸಸ್ ಸಂಸ್ಥೆಯ ಕಾರ್ತಿಕ್ ವಂದಿಸಿದರು.

Exit mobile version