Site icon Suddi Belthangady

ಕಕ್ಯಪದವು: ಎಲ್.ಸಿ.ಆರ್ ವಿದ್ಯಾಸಂಸ್ಥೆಯ ಪದವಿಪೂರ್ವ ವಿಭಾಗದ ಬಾಲಕರ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಇಬ್ಬರು ಕುಸ್ತಿಪಟುಗಳಿಗೆ ತೃತೀಯ ಸ್ಥಾನ

ಕಕ್ಯಪದವು: ಅ.4ರಂದು ಶಾಲಾ ಶಿಕ್ಷಣ ಇಲಾಖೆ ( ಪದವಿಪೂರ್ವ ವಿಭಾಗ) ಹಾಗೂ ಯೇನಪೋಯ ಪದವಿಪೂರ್ವ ಕಾಲೇಜು, ಜಪ್ಪಿನಮೊಗರು ಇದರ ಜಂಟಿ ಆಶ್ರಯದಲ್ಲಿ ಯೆನಪೋಯ ವಿಶ್ವವಿದ್ಯಾನಿಲಯ ಯೆಂಡುರೇನ್ಸ್ ಝೋನ್, ದೇರಳಕಟ್ಟೆ ಇಲ್ಲಿ ನಡೆದ “ಯೇನ್ ಅಖಾಡ” ಪದವಿಪೂರ್ವ ವಿಭಾಗದ ಜಿಲ್ಲಾ ಮಟ್ಟದ ಬಾಲಕರ ಕುಸ್ತಿ ಪಂದ್ಯಾಟದಲ್ಲಿ ಎಲ್.ಸಿ.ಆರ್ ವಿದ್ಯಾಸಂಸ್ಥೆಯ ಐವರು ಕುಸ್ತಿ ಪಟುಗಳಾದ ಮಹಮ್ಮದ್ ನಹೀಮ್ 75 ಕೆ.ಜಿ ವಿಭಾಗ, ಮಯಮ್ಮದ್ ಸಾಬಿತ್ 70 ಕೆ.ಜಿ ವಿಭಾಗ, ಮೊಹಮ್ಮದ್ ಅಝ್ಮಲ್ 65 ಕೆ.ಜಿ.ವಿಭಾಗ, ಎಮ್.ಎನ್.ಮುಹಮ್ಮದ್ ಅದಿಲ್ ಸನ 61 ಕೆ.ಜಿ.ವಿಭಾಗ, ಎ.ಪಿ.ಸಲ್ಮಾನುಲ್ ಪ್ಯಾರಿಸ್ 57 ಕೆ.ಜಿ. ವಿಭಾಗ ದಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಭಾಗವಹಿಸಿ , 57 ಕೆ.ಜಿ. ವಿಭಾಗದಲ್ಲಿ ಎ.ಪಿ.ಸಲ್ಮಾನುಲ್ ಪ್ಯಾರಿಸ್ ಹಾಗೂ 65 ಕೆ.ಜಿ ವಿಭಾಗದಲ್ಲಿ ಮೊಹಮ್ಮದ್ ಅಝ್ಮಲ್ ಇಬ್ಬರೂ ತೃತೀಯ ಸ್ಥಾನವನ್ನು ಪಡೆದು ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ಇವರಿಗೆ ಸಂಸ್ಥೆಯ ಹಳೆವಿದ್ಯಾರ್ಥಿ, ಹಿರಿಯ ಕುಸ್ತಿಪಟು ನೌಶಾದ್ ಪಿ.ಕೆ ತರಬೇತಿಯನ್ನು ನೀಡಿರುತ್ತಾರೆ.

Exit mobile version