Site icon Suddi Belthangady

ಕಾಯರ್ತಡ್ಕ: ಕುಂಬಾರರ ಸೇವಾ ಸಂಘ ಹಾಗೂ ಕುಂಭಶ್ರೀ ಗೆಳೆಯರ ಬಳಗದ ಸಹಭಾಗಿತ್ವದಲ್ಲಿ ಕುಂಭಶ್ರೀ ಮಕ್ಕಳ ಕುಣಿತ ಭಜನಾ ಬಳಗದ ಉದ್ಘಾಟನೆ ಹಾಗೂ ಗುರುವಂದನಾ ಕಾರ್ಯಕ್ರಮ

ಕಾಯರ್ತಡ್ಕ: ಕುಂಬಾರರ ಸೇವಾ ಸಂಘ ಹಾಗೂ ಕುಂಭಶ್ರೀ ಗೆಳೆಯರ ಬಳಗದ ಸಹಭಾಗಿತ್ವದಲ್ಲಿ ಉಜಿರೆ ಜನಾರ್ಧನ ಕುಂಬಾರ ಇವರ ಮಾರ್ಗದರ್ಶನದಲ್ಲಿ ಪಳಗಿದ ಪುಟಾಣಿ ಮಕ್ಕಳ ಕುಂಭಶ್ರೀ ಮಕ್ಕಳ ಕುಣಿತ ಭಜನಾ ಬಳಗದ ಉದ್ಘಾಟನೆ ಹಾಗೂ ಗುರುವಂದನಾ ಕಾರ್ಯಕ್ರಮವು ಶ್ರೀ ಉಮಾಮಹೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷಿಯ ಸ್ಥಾನವನ್ನು ಕುಂಬಾರರ ಸೇವಾ ಸಂಘದ ಗೌರವಾಧ್ಯಕ್ಷ ಸಂಜೀವ ಕುಂಬಾರ ಇವರು ವಹಿಸಿಕೊಂಡರು.

ಸಂಘದ ಸಕ್ರೀಯ ಕಾರ್ಯಕರ್ತರಾದಂತ ಮನೋಹರ್ ರವರು ಸ್ವಾಗತಿಸಿದರು. ಸಂತೋಷ್ ರವರು ಪ್ರಾಸ್ಥಾವಿಕ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ 2024ನೇ ಸಾಲಿನ SSLCಯ ಪರೀಕ್ಷೇಯಲ್ಲಿ 625ರಲ್ಲಿ 614 ಅಂಕ ಪಡೆದು ಸರಕಾರಿ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕಿಗೆ ದ್ವಿತೀಯ ಸ್ಥಾನವನ್ನು ಪಡೆದ ಸರಕಾರಿ ಪ್ರೌಢ ಶಾಲೆ ಕಾಯರ್ತಡ್ಕ ಇದರ ವಿದ್ಯಾರ್ಥಿನಿ ಕು.ಮೇಘನಾ ಹಾಗೂ ದ್ವಿತೀಯ PUCಯಲ್ಲಿ 88% ಅಂಕ ಪಡೆದ ಕು.ಪವಿತ್ರ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಮಾಮಹೇಶ್ವರ ದೇವಸ್ಥಾದ ಅಧ್ಯಕ್ಷ ಆನಂದ ಗೌಡ ಮರಕ್ಕಡ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಎಂ.ಕೆ., ಕಳೆಂಜ ಗ್ರಾ.ಪಂ. ಸದಸ್ಯೆ ಲಲಿತಾಕ್ಷೀ, ಹರೀಶ್ ಕೆ.ಬಿ ಕೋಯಿಲ ವಿಶ್ವ ಹಿಂದು ಪರಿಷತ್ ಸತ್ಸಂಗ ಪ್ರಮುಖ್ ಬೆಳ್ತಂಗಡಿ ಪ್ರಖಂಡದ ಅಶೋಕ್ ಗೌಡ ಅಶ್ವತ್ತಡಿ, ಕುಂಬಾರರ ಸೇವಾ ಸಂಘದ ಅಧ್ಯಕ್ಷರು ಗಣೇಶ್ ಎಂ ಕುಂಬಾರ ಹಾಗೂ ಕುಂಭಶ್ರೀಯ ಅಧ್ಯಕ್ಷ ಮೇದಪ್ಪ ಕುಂಬಾರ ಇವರು ಉಪಸ್ಥಿತರಿದ್ದರು.

ಗುರುಗಳಾದ ಜನಾರ್ಧನ ಕುಂಬಾರ ಇವರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಇದ್ದ ಗುರುಗಳ ಸಹಿತ ಎಲ್ಲರ ಉಪಸ್ಥಿತಿಯಲ್ಲಿ ಮಕ್ಕಳಿಗೆ ಅಕ್ಷತೆಯನ್ನು ಹಾಕುವ ಮುಖೇನ ಆಶಿರ್ವದಿಸಲಾಯಿತು. ನಂತರ ಮಕ್ಕಳ ಕುಣಿತ ಭಜನೆ ಪ್ರಾರಂಭವಾಯಿತು.

ಕುಂಭಶ್ರೀಯ ಗೌರವಾಧ್ಯಕ್ಷ ವಿಜಯ್ ಕೆ ಕಾರ್ಯಕ್ರಮ ನಿರೂಪಿಸಿದರು. ಯಶೋಧರ ಕುಂಬಾರವರು ವಂದಿಸಿದರು.

Exit mobile version