ಮೇಲಂತಬೆಟ್ಟು: ಬೆಳ್ತಂಗಡಿ ಟ್ರಸರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದಿ.ವಲೇರಿಯನ್ ಲೋಬೊರವರ ಪತ್ನಿ ಜುಲಿಯಾನಾ ಲೋಬೊ (90 ವರ್ಷ)ರವರು ಇಂದು (ಅ.4ರಂದು) ನಿಧನರಾದರು.
ಮೃತರು ಪುತ್ರರಾದ ಬೆಳ್ತಂಗಡಿ ಟಿ.ವಿ.ಎಸ್.ಲೋಬೊ ಮೋಟರ್ಸ್ ನ ಮಾಲಕ ರೊನಾಲ್ಡ್ ಲೋಬೊ, ವಕೀಲರಾದ ಎಲೋಸಿಯಸ್ ಲೋಬೊ, ಪುತ್ರಿಯರಾದ ವೆರೋನಿಕಾ ಲೋಬೊ, ಜೆನೆವೀವ್ ಲೋಬೊ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತಿಮ ಕ್ರಿಯೆಯು ಅ.6ರಂದು ಸಂಜೆ 4 ಗಂಟೆಗೆ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ನಡೆಯಲಿದೆ.