ಬೆಳ್ತಂಗಡಿ: ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಹಾಗೂ ಸಂಸ್ಥೆಯ ಪಾಲಕಿಯದಂತಹ ಸಂತ ತೆರೇಸಾ ರವರ ಹಬ್ಬವನ್ನು ಅ.2ರಂದು ಆಚರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಗಾಂಧೀಜಿಯವರ ಮಂತ್ರಘೋಷಣೆಗಳನ್ನು ಹಾಡುವುದರ ಮುಖಾಂತರ ಪ್ರಾರ್ಥನಾ ವಿಧಿಯನ್ನು ನಡೆಸಲಾಯಿತು.
ಪ್ರಾಂಶುಪಾಲೆ ಭಗಿನಿ ಆರೋಗ್ಯ, ಉಪನ್ಯಾಸಕರಾದ ಝೀಟಾ, ಪ್ರದೀಪ್, ಸುನಿತಾ, ಕಾಲೇಜು ನಾಯಕಿ ಕುಮಾರಿ ಗೀತಾರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿನಿ ಕುಮಾರಿ ನಾಫಿಯಾರವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪ್ರಾಂಶುಪಾಲರು ಹಾಗೂ ಎಲ್ಲಾ ಉಪನ್ಯಾಸಕರು ಪುಷ್ಪಾರ್ಚನೆ ಮಾಡುವ ಮುಖಾಂತರ ಗೌರವವನ್ನು ಸಲ್ಲಿಸಲಾಯಿತು.
ಸಂಸ್ಥೆಯ ಪಾಲಕಿಯಾದ ಸಂತ ತೆರೇಸಾ ರವರ ಭಾವಚಿತ್ರಕ್ಕೆ ಕಾಲೇಜಿನ ಪ್ರಾಂಶುಪಾಲೆ ಭಗಿನಿ ಆರೋಗ್ಯರವರು ಹೂಮಾಲೆಯನ್ನು ಅರ್ಪಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಾದ ಕುಮಾರಿ ಏಂಜಲ್ ಮೋನಿಸ್ ರವರು ನಿರೂಪಿಸಿದರು.