
ಮುಂಡೂರು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಶಾರದಾಂಬ ಭಜನಾ ಮಂಡಳಿ , ಶ್ರೀ ಶಾರದಾಂಬ ಯುವಕ ಮಂಡಲ, ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.3ರಿಂದ 11ರವರೆಗೆ ನಡೆಯಲಿರುವ ನವರಾತ್ರಿ ಉತ್ಸವ ಹಾಗೂ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದೇವಾಲಯದ ಪ್ರಧಾನ ಅರ್ಚಕ ಅರವಿಂದ ಭಟ್ ಇವರು ದೇವಸ್ಥಾನದಲ್ಲಿ ಸೆ.27ರಂದು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜೀವ ಸಾಲಿಯಾನ್, ಶಕುಂತಲಾ ಭಟ್, ರಾಘವೇಂದ್ರ ಭಟ್ ಭಜನಾ ಮಂಡಳಿ ಅಧ್ಯಕ ಶ್ರೀಧರ ಅಂಚನ್, ಕೋಶಾಧಿಕಾರಿ ಆನಂದ ಆಚಾರ್ಯ, ಕಾರ್ಯದರ್ಶಿ ಕೇಶವ ಕುಲಾಲ್ ಯುವಕ ಮಂಡಲದ ಅಧ್ಯಕ್ಷ, ರಮಾನಂದ ಸಾಲಿಯಾನ್, ಚಿದಾನಂದ ಆಚಾರ್ಯ ರಮೇಶ್ ದೇವಾಡಿಗ ಹಾಗೂ ಭಜನಾ ಮಂಡಳಿ ಸದಸ್ಯರಾದ ಯಶವಂತ, ವಿದ್ವಾಂಸ್ ಪೂಜಾರಿ, ರಕ್ಷಿತ್ ದೇವಾಡಿಗ, ಭುವನ್ ಪೂಜಾರಿ, ಕೌಶಿಕ್, ದೀಕ್ಷ, ಸಂಜನಾ, ಚೇತನ್, ಶೋಧನ, ಸಾನ್ವಿ, ಮೇಘನಾ ಮತ್ತಿತರರು ಉಪಸ್ಥಿತರಿದ್ದರು.