Site icon Suddi Belthangady

ಮುಂಡಾಜೆ: ಸೋಮಂತಡ್ಕದಲ್ಲಿ ಜ್ಞಾನಮೃತ ಕೋಚಿಂಗ್ ಸೆಂಟರ್ ಶುಭಾರಂಭ

ಮುಂಡಾಜೆ: ಸೋಮಂತಡ್ಕದ ಎಚ್.ಡಿ ಸೋಜ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ಜ್ಞಾನ ಮೃತ ಕೋಚಿಂಗ್ ಸೆಂಟರ್ ಅಕ್ಟೋಬರ್ 3ರಂದು ಶುಭಾರಂಭಗೊಂಡಿದೆ.

ಹಳ್ಳಿ ಭಾಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಕರನ್ನೊಳಗೊಂಡು ಶೈಕ್ಷಣಿಕ ಏಳಿಗೆಗಾಗಿ ಒಂದು ಹೆಜ್ಜೆ ಎಂಬ ಧ್ಯೇಯದೊಂದಿಗೆ ಶುಭಾರಂಭಗೊಂಡಿದೆ.

ಉದ್ಘಾಟನೆಯನ್ನು ಶ್ರೀ ಇಷ್ಟದೇವತಾ ಬಂಟಯಾನೆ ಕ್ಷೇತ್ರ ಕಲ್ಲಗುಂಡ ಚಿಬಿದ್ರೆ ಇಲ್ಲಿನ ಪ್ರಧಾನ ಅರ್ಚಕ ಗುರುರಾಜ್ ಶರ್ಮಾ ಇವರು ಗಣಹೋಮದ ಬಳಿಕ ದೀಪ ಪ್ರಜ್ವಲನೆಯ ಮೂಲಕ ಶುಭ ನುಡಿಗಳನ್ನಾಡಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಜ್ಞಾನಮೃತ ಕೋಚಿಂಗ್ ಸೆಂಟರ್ ಮಾಲಕ ಉಪನ್ಯಾಸಕ ಸತೀಶ್ ಸಾಲ್ಯಾನ್, ಹಾಗೂ ಬಂಧು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.

Exit mobile version