Site icon Suddi Belthangady

ಮುಂಡಾಜೆಯಲ್ಲಿ ಜ್ಞಾನಾಮೃತ ಕೋಚಿಂಗ್ ಸೆಂಟರ್ ಅ.3ರಂದು ಶುಭಾರಂಭ

ಮುಂಡಾಜೆ: ಸೋಮಂತಡ್ಕದ ಎಚ್.ಡಿ.ಡಿಸೋಜ ಕಾಂಪ್ಲೆಕ್ಸ್‌ನಲ್ಲಿ ಜ್ಞಾನಾಮೃತ ಕೋಚಿಂಗ್ ಸೆಂಟರ್ ಅಕ್ಟೋಬರ್ 3ರಂದು ಶುಭಾರಂಭಗೊಳ್ಳಲಿದೆ. 1ರಿಂದ 10ನೇ ತರಗತಿವರೆಗಿನ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಹಾಗೂ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಂಡಾಜೆಯ ಕೋಚಿಂಗ್ ಸೆಂಟರ್‌ನಲ್ಲಿ ಕೋಚಿಂಗ್ ನೀಡಲಾಗುತ್ತದೆ.

ಅಲ್ಲದೆ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಕಾನ್ಸ್‌ಟೇಬಲ್, ಎಫ್‌ಡಿಎ, ಎಸ್‌ಡಿಎ ಸಹಿತ ಎಲ್ಲ ರೀತಿಯ ಪರೀಕ್ಷೆಗಳಿಗೆ ಕೋಚಿಂಗ್ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಅತ್ಯಂತ ಕಡಿಮೆ ಶುಲ್ಕದೊಂದಿಗೆ ಉತ್ತಮ ಶಿಕ್ಷಕರನ್ನೊಳಗೊಂಡ ತಂಡ ಜ್ಞಾನಾಮೃತ ಕೋಚಿಂಗ್ ಸೆಂಟರ್‌ನಲ್ಲಿದೆ ಎಂದು ಮಾಲಕರು ತಿಳಿಸಿದ್ದಾರೆ.

Exit mobile version