Site icon Suddi Belthangady

ಪಡ್ಡಂದಡ್ಕದಲ್ಲಿ ಮೂಡಬಿದ್ರೆ ಶ್ರೀ ಮಹಾವೀರ ಪ. ಪೂ. ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ವೇಣೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ, ರಾಷ್ಟೀಯ ಸೇವಾ ಯೋಜನೆ,ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜು ಮೂಡಬಿದ್ರಿ ರಾಷ್ಟೀಯ ಸೇವಾ ಯೋಜನೆ ಘಟದ 7 ದಿನಗಳ ವಾರ್ಷಿಕ ವಿಶೇಷ ಶಿಬಿರ ಪಡ್ಡಂದಡ್ಕ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಅ.1ರಂದು ಪ್ರಗತಿಪರ ಕೃಷಿಕ ಬಾಲ್ಯ ಶಂಕರ್ ಭಟ್ ಉದ್ಘಾಟಿಸಿ ಮಾತಾಡಿ, ಈ ಶಿಬಿರವು ವಿದ್ಯಾರ್ಥಿಗಳಿಗೆ ಜೀವನಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತೆ ಮತ್ತು ಜನಸಾಮಾನ್ಯರೊಂದಿಗೆ ಬೆರೆಯುವ ಅವರ ಸಮಸ್ಯೆಯನ್ನು ಅರಿಯುವ ಅವಕಾಶ ಈ ಶಿಬಿರ ನೀಡುತ್ತೆ ಎಂದರು.

ಅತಿಥಿಯಾಗಿ ಆಗಮಿಸಿದ ಉದ್ಯಮಿ, ಜಿ.ಪ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಈ ಶಿಬಿರವು ವಿದ್ಯಾರ್ಥಿಗಳಿಗೆ ಹಳ್ಳಿಯ ಜೀವನ, ವ್ಯಕ್ತಿವಿಕಸನ, ಭಾವೈಕತೆ ಇತ್ಯಾದಿ ಬಗ್ಗೆ ಅನುಭವ ನೀಡುತ್ತದೆ ಎಂದರು.

ಪಡ್ಡಂದಡ್ಕ ನೂರುಲ್ ಹುಧಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ ಶುಭ ಹಾರೈಸಿ, ಈ ಶಿಬಿರವನ್ನು ಯಶಸ್ವಿ ಮಾಡುವ ಜವಾಬ್ದಾರಿ ಈ ಊರಿನ ನಾಗರೀಕರದ್ದು ಮತ್ತು ಶಿಬಿರಾರ್ಥಿಗಳನ್ನು ಸುಂದರ ನೆನಪುಗಳು ಬರುವಂತೆ ಎಲ್ಲಾ ವಿಧದ ಸಹಕಾರ ನೀಡತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಅಧಿಕಾರಿ ಎಚ್.ಎನ್.ಜಗದೀಶ್ ಮಾತಾಡಿ, ಭವಿಷ್ಯದಲ್ಲಿ ಎದುರಾಗುವಂತ ಸಂದರ್ಭ ಅನುಭವಿಸಲು ಈ ಶಿಬಿರ ಸಹಕಾರಿ ಮತ್ತು ಯಾವುದೇ ಆತಂಕ ಹಿಂಜರಿಕೆ ಇಲ್ಲದೆ ಭಾಗವಹಿಸಿ ಮತ್ತು ನಿಮ್ಮ ನಡೆ, ನುಡಿ ಪ್ರಾಮಾಣಿಕವಾಗಿರಲಿ ಎಂದು ಶುಭ ಹಾರೈಸಿದರು.

ಹೊಸಂಗಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಮಾತಾಡಿ, ಎಲ್ಲಾ ಇಲ್ಲಗಳ ನಡುವೆ ಬರುವ ಸಮಸ್ಯೆಗಳನ್ನು ಎದುರಿಸಿ ಉತ್ತಮ ನಾಗರಿಕರನ್ನಾಗಿ ಬೆಳೆಯಲು, ಶಿಸ್ತು, ನಾಯಕತ್ವವನ್ನು ಬೆಳೆಯಲು ಅವಕಾಶ ನೀಡುತ್ತದೆ ಎಂದರು.

ಪ್ರೊ.ರಮೇಶ್ ಭಟ್ , ಪ್ರಾಂಶುಪಾಲರು ಮಹಾವೀರ ಪದವಿ ಪೂರ್ವ ಕಾಲೇಜು ಮೂಡಬಿದ್ರೆ ಶುಭ ಹಾರೈಸಿ 7 ದಿನಗಳ ಶಿಬಿರ ಉತ್ತಮ ಅನುಭವ ನೀಡುವಂತಾಗಲಿ ಮತ್ತು ಸಿಗುವ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತೆ ಸೂಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ರಾಧಾಕೃಷ್ಣ, ಪ್ರಾಂಶುಪಾಲರು ಹಾಗು ಕಾರ್ಯದರ್ಶಿಗಳು ಎಸ್. ಎಮ್. ಸಿ ಟ್ರಸ್ಟ್ ಶ್ರೀ ಮಹಾವೀರ ಕಾಲೇಜು ಮೂಡಬಿದ್ರೆ ಮಾತಾಡಿ,ಶಿಬಾರ್ಥಿಗಳಿಗೆ ಜೀವನ ಪರಿಯಂತ ನೆನಪುಡುವಂತಹ ಸುಂದರ ಅನುಭವಗಳನ್ನು ಮತ್ತು ಜೀವನದ ಮೌಲ್ಯಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತೆ ಮತ್ತು ಅವುಗಳನ್ನು ಮುಂದಿನ ಜೀವನದಲ್ಲಿ ಅಳವಡಿಸುವಂತೆ ಶಿಬಿರಾರ್ಥಿಗಳಿಗೆ ಕರೆಕೊಟ್ಟರು
ವೇದಿಕೆಯಲ್ಲಿ ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯ ಹರಿಪ್ರಸಾದ್ ಹೊಸಂಗಡಿ, ಪ್ರಕಾಶ್ ದೇವಾಡಿಗ, ಶಾಲಾ ಹಿರಿಯ ಶಿಕ್ಷಕಿ ವಿನೋಧ ಕುಮಾರಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್, ರಾಷ್ಟ್ರೀಯಾ ಸೇವಾ ಯೋಜನೆ ಕಾರ್ಯದರ್ಶಿ ಪೂಜಾ, ಶಿವಾನಂದ ಉಪಸ್ಥಿತರಿದ್ದರು.ಎನ್. ಎಸ್. ಎಸ್ ಘಟಕದ ಕಾರ್ಯಕ್ರಮಧಿಕಾರಿ ರಶ್ಮಿತಾ ಸ್ವಾಗತಿಸಿದರು.ಉಪನ್ಯಾಸಕಿ ಕುಮಾರಿ ಕವಿತಾ ಮತ್ತು ಸುಪ್ರಿತಾ ಕಾರ್ಯಕ್ರಮ ಸಂಯೋಜಿಸಿದರು.

Exit mobile version