ಮುಂಡೂರು: ಮುಂಡೂರು ಶ್ರೀ ಕ್ಷೇತ್ರ ಮಂಗಳಗಿರಿ ಶ್ರೀ ದೇವಿ ನಾಗಾಂಬಿಕ ಅಮ್ಮನವರ ಸನ್ನಿಧಿಯಲ್ಲಿ ಅ.3ರಿಂದ 11ರ ವರೆಗೆ ನವರಾತ್ರಿ ಪೂಜಾ ಮಹೋತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಮೋಕ್ತೆಸರ ರಾಜೀವ ತಿಳಿಸಿದ್ದಾರೆ.
ಅ.3ರಂದು ಬೆಳಿಗ್ಗೆ ಪ್ರಾರ್ಥನೆ, ಪುಣ್ಯಾಹ ವಾಚನ ನವಕಲಶ ಪ್ರಧಾನ, ಗಣಹೋಮ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ತೆನೆ ತುಂಬಿಸುವುದು, ಮಹಾ ಪೂಜೆ, ಪ್ರಸಾದ ವಿತರಣೆ, ರಾತ್ರಿ ಕುಣಿತ
ಭಜನೆ, ಮಹಾಪೂಜೆ.
ಅ.4ರಿಂದ 10ರವರೆಗೆ ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಮಹಾಪೂಜೆ, ಅನ್ನಸಂತರ್ಪಣೆ ಪ್ರತಿದಿನ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.10ರಂದು ರಾತ್ರಿ ಜೋಡು ರಂಗ ಪೂಜೆ, ಅ.11ರಂದು ಬೆಳಿಗ್ಗೆ ಚಂಡಿಕಾ ಹೋಮ, ಸಂಜೆ ಆಯುಧ ಪೂಜೆ, ರಾತ್ರಿ 9 ಜನ ಮುತ್ತೈದೆಯವರಿಗೆ ಬಾಗಿನ ಸಮರ್ಪಣೆ, ಉದ್ಭವ ಮಹಾಗಣಪತಿ ಮತ್ತು ಶ್ರೀ ದೇವಿ ನಾಗಾಂಬಿಕ ಅಮ್ಮನವರಿಗೆ ಜೋಡು ರಂಗ ಪೂಜೆ, ರಾತ್ರಿ ವರಾಹಿ ಮಂತ್ರ ಮೂರ್ತಿ, ನಾಗ ಕಲ್ಲುರ್ಟಿ, ಸತ್ಯದೇವತೆ, ದೈವರಾಜ ಗುಳಿಗ, ಕೊರಗಜ್ಜ ದೈವಗಳಿಗೆ ಹರಕೆಯ ಕೋಲ ನಡೆಯಲಿದೆ.