Site icon Suddi Belthangady

ಕಕ್ಯಪದವು: ಎಲ್. ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದಲ್ಲಿ ಸಾಂಪ್ರದಾಯಿಕ ದಿನದ ಆಚರಣೆ

ಕಕ್ಯಪದವು: ಎಲ್.ಸಿ. ಆರ್ ವಿದ್ಯಾಸಂಸ್ಥೆಯಲ್ಲಿ ಸೆ.30ರಂದು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಾಂಪ್ರದಾಯಿಕ ದಿನವನ್ನು ಪ್ರಾಥಮಿಕ ವಿಭಾಗದ 1 ರಿಂದ 5ನೇ ತರಗತಿ ಮಕ್ಕಳಿಗೆ ಆಚರಿಸಲಾಯಿತು.

ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲ ಜೊಸ್ಟನ್ ಲೋಬೋ ಸಂಯೋಜಕರಾದ ಯಶವಂತ್ ಜಿ ನಾಯಕ್ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ವಿಜಯ ಕೆ ಭಾಗವಹಿಸಿದರು. ಅತಿಥಿಗಳಿಗೆ ಅಡಿಕೆ ವೀಳ್ಯದೆಲೆ ಕೊಟ್ಟು ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದರು . ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕಾರ್ಯಕ್ರಮದ ಮುಂದಿನ ಭಾಗವಾಗಿ ಮಕ್ಕಳು ತಾವು ಧರಿಸಿದ ಉಡುಗೆಗಳನ್ನು ಒಬ್ಬೊಬ್ಬರಾಗಿ ಪ್ರದರ್ಶಿಸಿದರು. ಇದರ ಜೊತೆಯಲ್ಲಿ ಕೆಲವೊಂದು ಗ್ರಾಮೀಣ ಕ್ರೀಡೆಗಳನ್ನು ಶಿಕ್ಷಕರು ಮಕ್ಕಳಿಂದ ಆಡಿಸಿದರು ಹಾಗೂ ವಿದ್ಯಾರ್ಥಿಗಳು ನೃತ್ಯ , ಹಾಗೂ ಕೆಲವೊಂದು ಕ್ರಾಪ್ಟ್ ಗಳನ್ನು ತಯಾರಿಸುವ ಮೂಲಕ ಎಲ್ಲರನ್ನೂ ಮನರಂಜಿಸಿದರು. ವಿದ್ಯಾರ್ಥಿಗಳಾದ ಸಮರ್ಥ್ ಹಾಗೂ ಹಿಭಾ ಫಾತಿಮ ಕಾರ್ಯಕ್ರಮವನ್ನು ನಿರೂಪಿಸಿ,ಧನ್ವಿ ಸ್ವಾಗತಿಸಿ , ಅಮೃತ ಫ್ರಭು ವಂದಿಸಿದರು.

Exit mobile version