Site icon Suddi Belthangady

ಕರಾಯ: ಭಾರತ್ ಬಂಕ್ ಮುಂದೆ ದ್ವಿಚಕ್ರ-ಇನೋವಾ ಡಿಕ್ಕಿ: ಬೈಕ್ ನಲ್ಲಿದ್ದ ಇಬ್ಬರು ಯುವಕರಿಗೆ ಗಂಭೀರ ಗಾಯ

ಕರಾಯ: ಇಲ್ಲಿನ ಭಾರತ್ ಪೆಟ್ರೋಲ್ ಬಂಕ್ ನ ಮುಂಭಾಗದಲ್ಲಿ ಇನೋವಾ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಬೈಕ್ ನಲ್ಲಿದ್ದ ಇಬ್ನರು ಯುವಕರು ಗಂಭೀರ ಗಾಯಗೊಂಡಿದ್ದಾರೆ.

ಇನೋವಾ ಕಾರು ಬಂಕ್ ಗೆಂದು ಬಲಕ್ಕೆ ಹೋಗಿ ರಾಂಗ್ ಸೈಡ್ ನಲ್ಲಿದ್ದು,‌ಈ ವೇಳೆ ವೇಗವಾಗಿ ಬಂದ ಯುವಕರು ಡಿಕ್ಕಿ ಹೊಡೆದಿದ್ದಾರೆ. ಅಪಾಚಿ ಬೈಕ್ ನಲ್ಲಿದ್ದ ಯುವಕರು ಕರಾಯದವರೆಂದು ಸ್ಥಳೀಯರು ತಿಳಿಸಿದ್ದಾರೆ. ಇಬ್ಬರು ಯುವಕರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

Exit mobile version