Site icon Suddi Belthangady

ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.3ರಿಂದ 11ರ ತನಕ ನವರಾತ್ರಿ ಉತ್ಸವ

ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.3ರಿಂದ 11ರ ತನಕ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ.ಪ್ರತಿ ದಿನ ಬೆಳಿಗ್ಗೆ 8ಗಂಟೆಗೆ ಪೂಜೆ ಮದ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಂತರ ಭೋಜನ ಪ್ರಸಾದ ಹಾಗೂ ಪ್ರತಿದಿನ ರಾತ್ರಿ 8ಗಂಟೆಗೆ ಮಹಾಮಂಗಳಾರತಿ ನಂತರ ಭೋಜನ ಪ್ರಸಾದ ನಡೆಯಲಿದೆ.

ನವರಾತ್ರಿ ಮೊದಲನೇ ದಿನ ಊರ ಪರವೂರ ಭಕ್ತರಿಂದ ವಸ್ತು ರೂಪದ ದೇಣಿಗೆ ಸಮರ್ಪಣೆ ನಡೆಯಲಿದೆ. ಅ.11ಮತ್ತು 12ಕ್ಕೆ ಬೆಳಿಗ್ಗೆ 8ಗಂಟೆಯಿಂದ ರಾತ್ರಿ 8ಗಂಟೆ ವರೆಗೆ ವಾಹನ ಪೂಜೆ ನಡೆಯಲಿದೆ.

ವಿಜಯದಶಮಿ ದಿನ ಬೆಳಿಗ್ಗೆ ಬೆಳಿಗ್ಗೆ 9ಗಂಟೆಯಿಂದ ಮದ್ಯಾಹ್ನ 12.30ರವರೆಗೆ ಅಕ್ಷರಾಭ್ಯಾಸ ನಡೆಯಲಿದೆ.ನವರಾತ್ರಿಯ ಪ್ರತಿದಿನ ರಾತ್ರಿ 7ರಿಂದ 8.15ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯುವುದಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version