ದೊಂಡೋಲೆ: ಮಡಿಕೇರಿ ಮುಂಬಯಿ ಖಾಸಗಿ ಬಸ್ ಡ್ರೈವರ್ ಆಗಿದ್ದು ನಿವೃತ್ತಿಯ ನಂತರ ಮಕ್ಕಳೊಂದಿಗೆ ವಾಸಿಸುತ್ತಿದ್ದ ದೊಂಡೋಲೆಯ ಶತಾಯುಷಿ ದಾಸಪ್ಪ ರೈ (100ವ) ಅಕ್ಟೋಬರ್ 1ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸೌಮ್ಯ ಸ್ವಭಾವದ ದಾಸಪ್ಪ ರೈಯವರು ರಾಷ್ಟ್ರಪಿತ ಗಾಂಧೀಜಿಯವರನ್ನು ನೋಡಿರುವ ಘಟನೆಗಳನ್ನು ಊರಿನ ಪುಟಾಣಿಗಳೊಂದಿಗೆ ಹಂಚಿಕೊಂಡಿದ್ದರು.
ಇವರು ಮಕ್ಕಳಾದ ವಿಜಯ ರೈ,ಆಶಾ ರೈ, ವಾಸು ರೈ ಮತ್ತು ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ದೊಂಡೋಲೆಯ ಗ್ರಾಮಸ್ಥರು ಪ್ರೀತಿಯ ಅಜ್ಜನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.