Site icon Suddi Belthangady

ಅ.3-11: ಅರಿಕೆಗುಡ್ಡೆ ವನದುರ್ಗ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

ಹತ್ಯಡ್ಕ: ನೂತನವಾಗಿ ನಿರ್ಮಾಣಗೊಂಡು ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ನಡೆದ ಮೇಲೆ ಮೊದಲಬಾರಿಗೆ ಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ನಡೆಸಲು ಆಡಳಿತ ಮಂಡಳಿ ಭಕ್ತಭಿಮಾನಿಗಳು ಗ್ರಾಮಸ್ಥರು ಸಿದ್ದವಾಗಿದ್ದು. ಪ್ರತಿ ದಿನ ಮುಂಜಾನೆ 7.15ಕ್ಕೆ ಅಭಿಷೇಕ ಪೂಜೆ ಪ್ರತಿ ದಿನ 12.30ಕ್ಕೆ ಮಹಾಪೂಜೆ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಪ್ರತಿ ದಿನ ರಾತ್ರಿ 8ಗಂಟೆಗೆ ದುರ್ಗಾಪೂಜೆ, ರಂಗಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ನಡೆಯಲಿದೆ.

ನವರಾತ್ರಿಯ ಮೊದಲನೇ ದಿನ ದೇವಾಲಯದಲ್ಲಿ ತೆನೆ ಕಟ್ಟುವುದು ಹಾಗೂ ನೂತನ ದೀಪ ಸ್ಥoಭ ಪ್ರಜ್ವಲನೆ ನಡೆಯಲಿದೆ.

ಅ.9ರಂದು ಹೊಸ ಅಕ್ಕಿ ಊಟ ಬ್ರಾಹ್ಮಣ ಸಮಾರಾಧನೆ ನಡೆಯಲಿದ್ದು ಅ.11ರಂದು ಬೆಳಿಗ್ಗೆ 8 ಗಂಟೆಯಿಂದ ಮದ್ಯಾಹ್ನ 12ರವರೆಗೆ ವಾಹನ ಪೂಜೆ ನಡೆಯಲಿದೆ.

ಅ.12ರಂದು ವಿಜಯದಶಮಿ ಪ್ರಯುಕ್ತ ಬೆಳಿಗ್ಗೆ ಗಂಟೆ 9ರಿಂದ 11ರವರೆಗೆ ಮಕ್ಕಳಿಗೆ ಅಕ್ಷರಾಭ್ಯಾಸ ರಾತ್ರಿ 8 ಗಂಟೆಗೆ ದುರ್ಗಾ ಪೂಜೆ, ರಂಗಪೂಜೆ, ಪ್ರಸಾದವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು. ಪ್ರತಿ ದಿನ ಬೆಳಿಗ್ಗೆ 11ರಿಂದ 12ರ ತನಕ ಮತ್ತು ಸಂಜೆ 6ರಿಂದ 8ರ ತನಕ ಊರ ಪರವೂರ ಭಜಕರಿಂದ ಕುಣಿತ ಭಜನೆ ಸೇವೆ ಇರುತ್ತದೆ.

Exit mobile version