Site icon Suddi Belthangady

ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಸನ್ ನ ಅತ್ಯುತ್ತಮ ವಲಯ ಪ್ರಶಸ್ತಿಯಲ್ಲಿ ಬೆಳ್ತಂಗಡಿ ವಲಯ ತೃತೀಯ ಸ್ಥಾನ

ಬೆಳ್ತಂಗಡಿ: ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಸನ್ ದ.ಕ., ಉಡುಪಿ ಜಿಲ್ಲೆಯ 14 ವಲಯಗಳ ಅತ್ಯುತ್ತಮ ವಲಯ ಪ್ರಶಸ್ತಿಯಲ್ಲಿ ಬೆಳ್ತಂಗಡಿ ವಲಯ ತೃತೀಯ ಸ್ಥಾನ ಪಡೆದುಕೊಂಡಿದೆ.

ಸೆ.29ರಂದು ಮಂಗಳೂರಿನ ಸೈಂಟ್ ಸೆಬಾಸ್ಟಿಯಿನ್ ಹಾಲ್ ನಲ್ಲಿ ಜರಗಿದ 34ನೇ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ವಲಯದ ಅಧ್ಯಕ್ಷೆ ಸಿಲ್ವಿಯ ಬೆಳ್ತಂಗಡಿ‌ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಧಾದಿಕಾರಿಗಳು, ಬೆಳ್ತಂಗಡಿ ವಲಯದ ಪಧಾದಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Exit mobile version