Site icon Suddi Belthangady

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ನ ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಸೆಪ್ಟೆಂಬರ್ 28ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.

ತೆರಿಗೆ ಸಲಹೆಗಾರ ಸಿನು ಅಬ್ರಹಾಂ ಬೆಳ್ತಂಗಡಿ ಇವರು ಆಗಮಿಸಿ, ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವಾಗ ಯಶಸ್ಸನ್ನುಗಳಿಸಲು ಸಾಧ್ಯ ಎಂದು ಮಾತನಾಡಿ, ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು.

ಬಂಗಾಡಿ ಮರಿಯಂಬಿಕ ಚರ್ಚ್ ಇದರ ಮಾತೃವೇದಿ ಘಟಕದ ಅಧ್ಯಕ್ಷೆ ಆನಿಮೋಲ್ ಹಾಗೂ ಘಟಕದ ಪದಾಧಕಾರಿಗಳ ನೇತೃತ್ವದಲ್ಲಿ ಪೌಷ್ಟಿಕ ಆಹಾರದ ಕಿಟ್ ವಿತರಿಸಿ, 10,000/- ವನ್ನು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮಕ್ಕೆ ನೀಡಿದರು.

ಹರಿಣಾಕ್ಷಿ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ.ಬಿನೋಯಿ ಎ.ಜೆ.ಇವರು ‘ಬಡವ ಬಲ್ಲಿದ ಭೇದ ಭಾವ ವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಗಡಿಯಾರದ ಶೈಲಿಯೂ ನಮ್ಮದಾಗ ಬೇಕು’ ಎಂದು ಪ್ರಾಸ್ತವಿಕ ನುಡಿಯನ್ನು ಆಡಿದರು.

ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಶಾರದಾ ರವರು ಪ್ರಾರ್ಥನೆ ಹಾಡಿದರು.ಡಿ.ಕೆ.ಆರ್.ಡಿ ಎಸ್. ಸಂಸ್ಥೆಯ ಸoಯೋಜಕಿ ಕು.ಶ್ರೇಯಾ ಇವರು ಎಲ್ಲರನ್ನೂ ಸ್ವಾಗತಿಸಿದರು. ನವ ಜೀವನ ಆರೈಕೆ ಮತ್ತು ಬೆಂಬಲ ಕಾರ್ಯಕ್ರಮದ ಸದಸ್ಯೆ ಶಶಿಕಲ ಇವರು ವಂದಿಸಿದರು.

ಕಾರ್ಯಕರ್ತರು ಮಾರ್ಕ್ ಡಿ ಸೋಜ ರವರು ಕಾರ್ಯಕ್ರಮ ನಿರೂಪಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾತು.

Exit mobile version