Site icon Suddi Belthangady

ಎಂ.ಎಸ್ಸಿ ಸ್ನಾತಕೋತ್ತರ ಪರೀಕ್ಷೆ: ನಾರಾವಿಯ ಪ್ರಿಮಲ್ ನಿಶ್ಮಾ ರೊಡ್ರಿಗಸ್ ಗೆ ಪ್ರಥಮ ರ‍್ಯಾಂಕ್

ನಾರಾವಿ: ಬೆಂಗಳೂರು ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಎಂ.ಎಸ್ಸಿ ಸ್ನಾತಕೋತ್ತರ ಪರೀಕ್ಷೆಯ ಅನಾಲಿಟಿಕಲ್ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಿಮಲ್ ನಿಶ್ಮಾ ರೊಡ್ರಿಗಸ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದು ಸಪ್ಟೆಂಬರ್ 27ರಂದು ನಡೆದ ಘಟಿಕೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ನಾರಾವಿ ನಿವಾಸಿಯಾಗಿರುವ ಇವರು ಹೊಸ್ಮಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕಿ ಮಾರ್ಗರೆಟ್ ಪಿಂಟೋ ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜುನ ಇತಿಹಾಸ ವಿಭಾಗದ ಉಪನ್ಯಾಸಕ ವಿನ್ಸೆಂಟ್ ರೊಡ್ರಿಗಸ್ ದಂಪತಿಗಳ ಸುಪುತ್ರಿಯಾಗಿರುತ್ತಾರೆ.

Exit mobile version