ಉಜಿರೆ: ಉಜಿರೆಯ ಶ್ರೀ ಧ.ಮ. ನ್ಯಾಚುರೋಪತಿ ಕಾಲೇಜಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇದರ ಮಂಗಳೂರು ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭ ಸೆ.28ರಂದು ನಡೆಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶಾಶ್ವತ ಫಲಕ ಮತ್ತು ಪ್ರಶಸ್ತಿ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕುಮಾರ್ ಉಪಸ್ಥಿತರಿದ್ದರು.
ಈ ಪಂದ್ಯಾಟದಲ್ಲಿ ಒಟ್ಟು 19 ತಂಡಗಳು ಭಾಗವಹಿಸಿದ್ದು ಪ್ರಥಮ ಸ್ಥಾನವನ್ನು ಎ.ಜೆ.ಮೆಡಿಕಲ್ ಸೈನ್ಸ್ ಮಂಗಳೂರು, ದ್ವಿತೀಯ ಸ್ಥಾನವನ್ನು ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕೊಡಗು, ತೃತೀಯ ಸ್ಥಾನವನ್ನು, ಉಜಿರೆ ಎಸ್.ಡಿ.ಎಮ್.ನ್ಯಾಚುರಪತಿ ಕಾಲೇಜು ಹಾಗೂ ಚತುರ್ಥ ಸ್ಥಾನವನ್ನು ಮಂಗಳೂರು ಫಾದರ್ ಮುಲ್ಲರ್ ಎಲೈಡ್ ಹೆಲ್ತ್ ಸೈನ್ಸ್ ಪಡೆದರು.
ಬೆಸ್ಟ್ ರೈಡರ್ ನಂದನ್ ಕೊಡಗು, ಬೆಸ್ಟ್ ಕ್ಯಾಚರ್ ವಿಕ್ಯಾತ್ ಉಜಿರೆ, ಬೆಸ್ಟ್ ಆಲ್ ರೌಂಡರ್ ವೀರೇಶ್ ಮಂಗಳೂರು ಆಗಿ ಮೂಡಿಬಂದರು. ಧರ್ಮೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.