ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಅಕ್ಟೋಬರ್ 3ರಿಂದ 11ರವರೆಗೆ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6 ರಿಂದ 9ರ ವರೆಗೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ.3: ಗುರುವಾರ: ಕುಮಾರಿ ಸುಪ್ರಿಯಾ ಕೋರ್ನಾಯ, ಧರ್ಮಸ್ಥಳ (ಶಾಸ್ತ್ರೀಯಸಂಗೀತ). ಅ.4: ಶುಕ್ರವಾರ: ಡಾ.ಕಿರಣ್ಕುಮಾರ್ ಮತ್ತು ಬಳಗ, ಗಾನಸಿರಿ ಕಲಾಕೇಂದ್ರ, ಪುತ್ತೂರು (ಭಕ್ತಿಗೀತೆಗಳ ಗಾಯನ), ಅ.5: ಶನಿವಾರ: ಕುಮಾರಿ ಶ್ರದ್ಧಾಕೋಟೆ, ಪದ್ಮುಂಜ, ಬೆಳ್ತಂಗಡಿ (ಶಾಸ್ತ್ರೀಯಸಂಗೀತ). ಅ.6: ಭಾನುವಾರ: ಕುಮಾರಿ ತನುಶ್ರೀ, ಮಂಗಳೂರು (ಸುಗಮಸಂಗೀತ). ಅ.7: ಸೋಮವಾರ: ರಕ್ಷಣ್ ಜಿ. ರಾವ್, ಕನ್ಯಾಡಿ, ಧರ್ಮಸ್ಥಳ (ಭಕ್ತಿಸಂಗೀತ). ಅ.8: ಮಂಗಳವಾರ: ಮಂಗಳೂರು ಶ್ರೀಪ್ರಿಯಾ ಪರಕ್ಕಜೆ, ಮತ್ತು ಕುಮಾರಿ ಸಿಂಚನಲಕ್ಷ್ಮೀ, ಗುರುವಾಯನಕೆರೆ (ಭಕ್ತಿಸಂಗೀತ), ಅ.9: ಬುಧವಾರ: ಕುಮಾರಿ ಪ್ರಸೀದಾರಾವ್ ಮತ್ತು ಬಳಗ, ಕನ್ಯಾಡಿ, ಧರ್ಮಸ್ಥಳ (ಭಕ್ತಿಗೀತೆಗಳು). ಅ.10: ಗುರುವಾರ: ಕುಮಾರಿ ಆತ್ರೇಯಿಕೃಷ್ಣ ಮತ್ತು ಕುಮಾರಿ ಮಹತಿ, ಕಾರ್ಕಳ (ಶಾಸ್ತ್ರೀಯಸಂಗೀತ ಮತ್ತು ವಯಲಿನ್). ಅ.11: ಶುಕ್ರವಾರ: ಕುಮಾರಿ ದಿವ್ಯಾನಿಧಿ ರೈ, ಬಂಟ್ವಾಳ, ಅರ್ಚನಾ ಕುಲಕರ್ಣಿ, ಬೆಂಗಳೂರು (ಸಂಗೀತ).