Site icon Suddi Belthangady

ನಮಗೆ ಸೌಲಭ್ಯ ಕೊಡಿ: ನಂತರ ಕೆಲಸ ಮಾಡಿಸಿ: ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ

ಬೆಳ್ತಂಗಡಿ: ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಸೇವಾ ಸೌಲಭ್ಯಗಳನ್ನು ಒದಗಿಸಲು ಮತ್ತು ಮೊಬೈಲ್ ಆಪ್ ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡವನ್ನು ನಿಲ್ಲಿಸಲು ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಅನಿರ್ಧಿಷ್ಟವಧಿ ಮುಷ್ಕರ ಆರಂಭವಾಗಿದೆ.

ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಆವರಣದಲ್ಲಿ ಸೆ.26ರಂದು ಕಪ್ಪು ಪಟ್ಟಿ ಧರಿಸಿದ ಗ್ರಾಮ ಆಡಳಿತಾಧಿಕಾರಿಗಳು ಧರಣಿ ಆರಂಭಿಸಿದ್ದಾರೆ. ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಮುಂದೆ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಈ ವೇಳೆ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರದೀಪ್ ಕುಮಾರ್, ಗ್ರಾಮ ಸಹಾಯಕರ ಸಂಘದ ಅದ್ಯಕ್ಷ ಸತೀಶ್, ಪರಮೇಶ್ವರ್, ವಿಜೇತ್ , ಪೃಥ್ವಿ, ಸಂತೋಷ್ ಕುಮಾರ್, ಆಶಾ, ಅಂಕಿತ್ ಜೈನ್ ಉಷಾ ಕಿರಣ್, ಜಾಫರ, ಶ್ರುತಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾದರು.

Exit mobile version