Site icon Suddi Belthangady

ಅ.2ರಂದು ಬದ್ಯಾರ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ

ಬೆಳ್ತಂಗಡಿ: ಬದ್ಯಾರ್ ಫಾದರ್ ಎಲ್.ಎಂ. ಪಿಂಟೋ ಆಸ್ಪತ್ರೆ ಹಾಗೂ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ಅ.2ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬದ್ಯಾರ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ನಡೆಯಲಿದೆ.

ಮೆಡಿಸಿನ್ ವಿಭಾಗ, ಕಿವಿ, ಮೂಗು ಹಾಗೂ ಗಂಟಲು ವಿಭಾಗ, ಫಿಸಿಯೋಥೆರಪಿ ವಿಭಾಗ, ದಂತ ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಮಕ್ಕಳ ವಿಭಾಗ, ಕಣ್ಣಿನ ವಿಭಾಗ, ಮೂಳೆರೋಗ ವಿಭಾಗ, ಚರ್ಮರೋಗ ವಿಭಾಗ, ಸ್ತ್ರೀರೋಗ ವಿಭಾಗದಲ್ಲಿ ಚಿಕಿತ್ಸೆಗಳನ್ನು ಶಿಬಿರದಲ್ಲಿ ನೀಡಲಾಗುವುದು.

ಶಿಬಿರದಲ್ಲಿ ಉಚಿತ ಸೌಲಭ್ಯಗಳು: ಉಚಿತ ನೋಂದಣಿ, ವೈದ್ಯರ ಉಚಿತ ಸಲಹೆ, ಉಚಿತ ಔಷಧಿ ವಿತರಣೆ, ರಕ್ತಪರೀಕ್ಷೆ, ಜಿಆರ್‌ಬಿಎಸ್, ಬ್ಲಡ್ ಗ್ರೂಪಿಂಗ್.

ಶೇ.50 ರಿಯಾಯಿತಿ ದರ: ಶಿಬಿರದಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಎಕ್ಸ್ -ರೇ, ಇಸಿಜಿ, ರಕ್ತಪರೀಕ್ಷೆ -ಎಚ್‌ಬಿ, ಸಿಬಿಸಿ, ಇಎಸ್ಆರ್, ಟಿಎಸ್ಎಚ್, ಆರ್‌ಎಫ್‌ಟಿ, ಎಲ್ಎಫ್‌ಟಿ, ಲಿಪಿಡ್ ಪ್ರೊಫೈಲ್, ಫಾದರ್ ಎಲ್.ಎಮ್ ಪಿಂಟೊ ಆರೋಗ್ಯ ಕಾರ್ಡ್ ಸೌಲಭ್ಯ ಶೇ.50ರ ದರದಲ್ಲಿ ಸಿಗಲಿದೆ.

ಹೆಚ್ಚಿನ ಮಾಹಿತಿಗೆ 8762692625 ಸಂಪರ್ಕಿಸಬಹುದು.

Exit mobile version