Site icon Suddi Belthangady

ನಾವೂರು: ಅಂತೋಣಿ ಎಂಬುವವರ ಮಗ ಲಿಜೀನ್ ಅಂತೋನಿ ನಾಪತ್ತೆ- ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಂಪರ್ಕಿಸಲು ಮನವಿ

ಬೆಳ್ತಂಗಡಿ: ನಾವೂರು ಗ್ರಾಮದ ಅಂತೋಣಿ ಎಂಬುವವರ ಮಗ ಲಿಜೀನ್ ಅಂತೋನಿ(14 ವರ್ಷ) ಎಂಬುವವರು ಸೆ.25ರಂದು ನಾವೂರು ಗ್ರಾಮದ ಸರಕಾರಿ ಪ್ರೌಢಶಾಲೆಗೆ ಶಾಲಾ ತರಗತಿ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

ಕಾಣೆಯಾದ ಮಗುವಿನ ವಿವರ: ಹೆಸರು- ಲಿಜೀನ್ ಅಂತೋನಿ ಹೆಸರಿನ, ವಯಸ್ಸು- 14 ವರ್ಷ, ಎತ್ತರ- 4 ಅಡಿ 5 ಇಂಚು, ಮಾತಾಡುವ ಭಾಷೆ- ತುಳು, ಕನ್ನಡ, ಧರಿಸಿದ ಉಡುಪು- ನೇರಳೆ ಬಣ್ಣದ ಟೀ ಶರ್ಟ್ ಮತ್ತು ಕ್ರೀಂ ಬಣ್ಣದ ಪ್ಯಾಂಟ್.

ಕಾಣೆಯಾದ ಮಗು ಕಂಡು ಬಂದಲ್ಲಿ ಅಥವಾ ಕಾಣೆಯಾದ ಮಗುವಿನ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ, ಬೆಳ್ತಂಗಡಿ ಪೊಲೀಸ್ ಠಾಣಾ ನಂಬರ್ 08256232093 ಅಥವಾ ಪೊಲೀಸ್ ನಿರೀಕ್ಷಕರು
ಮೊ:9480805370 ರವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.

Exit mobile version