ಶಿಶಿಲ: ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ ನಾಗನಡ್ಕ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಎ ಎಸ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಂಘದ ಕಾರ್ಯದರ್ಶಿ ಲಕ್ಷ್ಮೀಶ್ ರವರು ಸಂಘದ ವಾರ್ಷಿಕ ಲೆಕ್ಕಾಚಾರ ಮಂಡಿಸಿದರು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮೀಶ್ ಡಿ, ಸದಸ್ಯರಾದ ಕೊರಗಪ್ಪ ಗೌಡ, ಆನಂದ ಗೌಡ, ಚಂದ್ರಶೇಖರ ಗೌಡ, ಈಶ್ವರಪ್ಪ ಗೌಡ, ಶೇಖರ್ ಪುರುಷ, ಸುಂದರ ಎಂ. ಕೆ, ಸರೋಜ, ಸೇಸಮ್ಮ ಉಪಸ್ಥಿತರಿದ್ದರು.
ಸಂಘದ ಸದಸ್ಯರಲ್ಲಿ ಅತೀ ಹೆಚ್ಚು ಹಾಲು ಸಂಘಕ್ಕೆ ನೀಡಿದವರಿಗೆ ವಿಶೇಷ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.ಉಪಾಧ್ಯಕ್ಷ ಡಿ.ಲಕ್ಷ್ಮೀಶ್ ಗೌಡ ಸ್ವಾಗತಿಸಿ, ಕೃ. ಗ. ಕಾರ್ಯಕರ್ತ ಶೋಧನ್ ಡಿ ಧನ್ಯವಾದ ನೆರವೇರಿಸಿದರು. ಹಾಲು ಪರೀಕ್ಷಕಿ ಶೋಭಾ ಎ ಕಾರ್ಯಕ್ರಮಕ್ಕೆ ಸಹಕರಿಸಿದರು.