Site icon Suddi Belthangady

ಕನ್ಯಾಡಿ ಪುಡ್ಕೆತ್ ಚಡವಿನಲ್ಲಿ ಕೆಟ್ಟು ನಿಂತ ಬಸ್- ವಿದ್ಯಾರ್ಥಿಗಳ ಪರದಾಟ- ನಿಮಿಷಕ್ಕೂ ಹೆಚ್ಚು ಕಾಲ ರಸ್ತೆಯಲ್ಲೇ ಪ್ರಯಾಣಿಕರು

ಕನ್ಯಾಡಿ: ಧರ್ಮಸ್ಥಳದಿಂದ ಪುತ್ತೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಕನ್ಯಾಡಿಯ ಪುಡ್ಕೆತ್ ಚಡವು ಬಳಿ ಬೆಳಗ್ಗೆ ಸೆ.25ರಂದು ಕೆಟ್ಟು ನಿಂತ ಪರಿಣಾಮ ವಿದ್ಯಾರ್ಥಿಗಳು ಪರದಾಟ ನಡೆಸಿದ ಘಟನೆ ನಡೆದಿದೆ.ಕನ್ಯಾಡಿಯ ಪುಡ್ಕೆತ್ ಬಳಿ ಬಸ್ ನ ಆಕ್ಸೆಲ್ ವಯರ್ ನಲ್ಲಿ ಸಮಸ್ಯೆಯಾಗಿ ಕೆಟ್ಟು ನಿಂತಿತ್ತು ಎಂದು ಬಸ್ ನಿರ್ವಾಹಕ ತಿಳಿಸಿದರು.

ಈ ಬಸ್ ನಲ್ಲಿ ಪುತ್ತೂರಿಗೆ ಹೋಗುವ ಪ್ರಯಾಣಿಕರು, ವಾಣಿ ಕಾಲೇಜು, ಮೇಲಂತಬೆಟ್ಟು ಪದವಿ ಕಾಲೇಜು, ಜೂನಿಯರ್ ಕಾಲೇಜು ಬೆಳ್ತಂಗಡಿ, ಗುರುವಾಯನಕೆರೆಗೆ, ಗೇರುಕಟ್ಟೆ ಮುಂತಾದೆಡೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಟ ನಡೆಸಿದರು.

ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಮಕ್ಕಳು ಬಸ್ ಸಿಗದೇ ಪರದಾಡಿದರು. ಅಲ್ಲದೇ, ನಿಲ್ಲಿಸಿರುವ ಬಸ್ ಫುಲ್ ಆಗಿತ್ತು, ಮತ್ತೆ ಕೆಲವು ನಿಲ್ಲಿಸಲಿಲ್ಲ ಎಂದು ಹೇಳಿದರು. ಅಲ್ಲದೇ, ಹೀಗೆ ಬಸ್ ಕೆಟ್ಟು ನಿಲ್ಲುವುದು ನಿರಂತರವಾಗಿ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.ಕೆಟ್ಟು ಹೋದ ಬಸ್ ನ್ನು ಸರಿಪಡಿಸಲು ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಘಟಕದ ಸಿಬ್ಬಂದಿಯನ್ನು ಕಳುಹಿಸಿ ಬಸ್ ಸರಿಪಡಿಸುವಲ್ಲಿ ಕಾರ್ಯ ಪ್ರವೃತ್ತರಾದರು.

ಬಳಿಕ ಪ್ರಯಾಣಿಕರನ್ನು ಬದಲಿ ಬಸ್ ನಲ್ಲಿ ಕಳುಹಿಸಲಾಯಿತು.

Exit mobile version