ಉಜಿರೆ: ದೊಂಪದಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಎಸ್ ಡಿ ಎಂ ಸಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ದಾಮೋದರ, ಉಪಾಧ್ಯಕ್ಷೆಯಾಗಿ ರಮ್ಯ ಆಯ್ಕೆಯಾದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಶಶಿಕಲಾ, ಸಿಆರ್‌ಪಿ ಪ್ರತಿಮಾ ಉಪಸ್ಥಿತರಿದ್ದರು.ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಶಿಕ್ಷಕ ಸುರೇಶ್ ಆಚಾರ್ ಸ್ವಾಗತಿಸಿದರು. ಸಿಆರ್‌ಪಿ ಪ್ರತಿಮಾ ಸರಕಾರಿ ಶಾಲೆಗಳಲ್ಲಿ ಎಸ್ ಡಿ ಎಂ ಸಿ ಯ ಮಹತ್ವ ಹಾಗೂ ಸದಸ್ಯರ ಕರ್ತವ್ಯಗಳ ಬಗ್ಗೆ ತಿಳಿಸಿದರು.
ಪೋಷಕರಿಂದ ನೂತನವಾಗಿ ಸರಿತಾ, ಗೀತಾ, ವಸಂತಿ, ರೇಖಾ, ವಿದ್ಯಾ, ಲೀಲಾವತಿ, ಸಾವಿತ್ರಿ, ರತ್ನಾವತಿ, ರಮ್ಯಾ, ಶೇಖರ್, ಶೀನ, ವೇಣುಗೋಪಾಲ್, ಹೇಮಂತ್ ಪ್ರಭು, ದಾಮೋದರ್, ಉಮೇಶ್ ಗೌಡ, ಸುರೇಶ್, ಉಮೇಶ್, ಹರೀಶ್ ಪೂಜಾರಿ 18 ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಅವರಲ್ಲಿ ದಾಮೋದರ್ ಅಧ್ಯಕ್ಷರಾಗಿಯೂ, ರಮ್ಯ ಉಪಾಧ್ಯಕ್ಷರಾಗಿಯೂ ಆಯ್ಕೆಯಾದರು. ಶಿಕ್ಷಕಿ ಸೌಮ್ಯ ನಾಯಕ್ ವಂದಿಸಿದರು.