Site icon Suddi Belthangady

ಉಜಿರೆ: ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ಯಶೋವನ ಭೇಟಿ ಕಾರ್ಯಕ್ರಮ

ಉಜಿರೆ: ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಎನ್ ಎಸ್ ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಹಭಾಗಿತ್ವದಲ್ಲಿ ಯಶೋವನಕ್ಕೆ ಸೆ.23ರಂದು ಭೇಟಿ ಕೊಡಲಾಯಿತು.

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕುಮಾರಿ ಶಕುಂತಲಾ, ಸಹಾಯಕ ಪ್ರಾಧ್ಯಾಪಕರು ಸಸ್ಯಶಾಸ್ತ್ರ ವಿಭಾಗ ಉಜಿರೆ ಎಸ್ ಡಿ ಎಂ ಕಾಲೇಜು ಮತ್ತು ಕುಮಾರಿ ಮಂಜುಶ್ರೀ ಸಹಾಯಕ ಪ್ರಾದ್ಯಾಪಕರು ಸಸ್ಯಶಾಸ್ತ್ರ ವಿಭಾಗ ಉಜಿರೆ ಎಸ್ ಡಿ ಎಂ ಕಾಲೇಜು ಇವರು ವಹಿಸಿ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸಸ್ಯಗಳ ಬಗ್ಗೆ ಮತ್ತು ಔಷಧೀಯ ಗುಣವುಳ್ಳ ಗಿಡ ಹಾಗೂ ಮರಗಳ ಬಗ್ಗೆ ಪರಿಚಯಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ನ ಯೋಜನಾಧಿಕಾರಿ ಪ್ರಕಾಶ್ ಮತ್ತು ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಅವನೀಶ್ ಪಿ ಮತ್ತು ವಿಜ್ಞಾನ ವಿಭಾಗದ ರಾಜೇಶ್ ಕೆ ಮತ್ತು ಇಂಗ್ಲಿಷ್ ವಿಭಾಗದ ಶಂಕರ್ ಭಟ್ ಮತ್ತು ಎನ್ ಎಸ್ ಎಸ್ ನ ಉಪಯೋಜನಾಧಿಕಾರಿ ಲೋಹಿತ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಿಬ್ಬಂದಿಗಳು ಮತ್ತು ಎನ್ ಎಸ್ ಎಸ್ ನ ಸಿಬ್ಬಂದಿಗಳು ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Exit mobile version