Site icon Suddi Belthangady

ಎಸ್‌ಬಿಐ ಲೈಫ್‌ ಕಾರ್ಕಳ ಬ್ರಾಂಚ್ ಬೆಳ್ತಂಗಡಿ ಘಟಕದ ಮಂಜುನಾಥ್ ಗುಡಿಗಾರ್ ರಿಗೆ ಇಂಟರ್ನ್ಯಾಷನಲ್ ಕ್ವಾಲಿಟಿ ಅವಾರ್ಡ್

ಬೆಳ್ತಂಗಡಿ: ಬೆಳ್ತಂಗಡಿ ಘಟಕದ ಎಸ್‌ಬಿಐ ಲೈಫ್ ಕಾರ್ಕಳ ಬ್ರಾಂಚಿನ ಮಂಜುನಾಥ್ ಗುಡಿಗಾರ್ ರವರು ತಾಲೂಕಿನಲ್ಲಿ ಉದ್ಯಮದಾರರಿಗೆ, ವೃತ್ತಿನಿರತರಿಗೆ ಹಾಗೂ ಜನಸಾಮಾನ್ಯರಿಗೆ ಲೈಫ್‌ ಇನ್ಶುರೆನ್ಸ್‌, ಮ್ಯೂಚ್ವಲ್‌ ಫಂಡ್‌, ಎಸ್‌ ಐಪಿ(SIP) ಬಗ್ಗೆ ಸಮರ್ಪಕ ಮಾಹಿತಿ ನೀಡಿ ಹೂಡಿಕೆಯ ಬಗ್ಗೆ ಜ್ಞಾನ ನೀಡುವುದರ ಜೊತೆಗೆ ಇವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಈ ಸಂದರ್ಭಕ್ಕಾಗಿ ಕಾರ್ಕಳ ಎಸ್‌ಬಿಐ ಲೈಫ್‌ ಬ್ಯಾಂಚ್‌ ಇವರನ್ನು ಇಂಟರ್ನ್ಯಾಷನಲ್ ಕ್ವಾಲಿಟಿ ಅವಾರ್ಡ್ ಮತ್ತು ಜುವೆಲ್ ಆಫ್ ಎಸ್‌ಬಿಐ ಲೈಫ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನಲ್ಲಿ 23 ಸೆಪ್ಟೆಂಬರ್ 23ರಂದು ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೀಜನಲ್ ಡೈರೆಕ್ಟರ್ ಅಶ್ವಿನಿ ಕುಮಾರ್, ಶುಕ್ಲ ಮತ್ತು ಆರ್ ಎಂ.ಸುರೇಶ್ ಚಂದ್ರ ರೆಡ್ಡಿ ಹಾಗೂ ಬ್ರಾಂಚ್ ಮ್ಯಾನೇಜರ್ ಸಿದ್ದಪ್ಪ ಸ್ವಾಮಿ ಉಪಸ್ಥಿತರಿದ್ದರು.

Exit mobile version