Site icon Suddi Belthangady

ಪಿಲಿಗೂಡು: ಶ್ವೇತ ಸಮೂಹ ಹಾಲು ಉತ್ಪಾದಕರ ಸಹಕಾರಿ ವಾರ್ಷಿಕ ಸಾಮಾನ್ಯ ಸಭೆ

ಕಣಿಯೂರು: ಪಿಲಿಗೂಡು “ಶ್ವೇತ ಸಮೂಹ” ಹಾಲು ಉತ್ಪಾದಕರ ಸಹಕಾರಿ ಸಂಘದ 2022-23ನೇ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷೆ ಕುಸುಮಾವತಿ ಕೆ. ಅಧ್ಯಕ್ಷತೆಯಲ್ಲಿ ಸೆ.22ರಂದು ಸಂಘದ ಸಭಾಭವನದಲ್ಲಿ ಜರಗಿತು.

2023-24ನೇ ಸಾಲಿನ ಒಟ್ಟು ವ್ಯವಹಾರ 24403937.12, ಲಾಭ 617967.51 ಗಳಿಸಿತು. ಶೇಕಡ 25 ಡಿವಿಡೆಂಡ್ ಹಾಗೂ ರೈತರಿಗೆ 65% ಬೋನಸ್ ನೀಡಲಾಯಿತು.

ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ರಾಜೇಶ್ ಕಾಮತ್ ಪಿ. ಒಕ್ಕೂಟದ ಸದಸ್ಯರಿಗೆ ದೊರೆಯುವ ಅನುದಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ದ.ಕ ಸಹಾಯಕ ವ್ಯವಸ್ಥಾಪಕ ಬೆಳ್ತಂಗಡಿ ಪಶು ವೈದ್ಯಾಧಿಕಾರಿ ಡಾ.ಗಣಪತಿ ಬಿ.ಎಮ್ ಜಾನುವಾರುಗಳ ಮಾಹಿತಿ ನೀಡಿದರು.

ಸಂಘಕ್ಕೆ ಹೆಚ್ಚು ಹಾಲು ಹಾಕಿದ ಜೊಹರಾಬಿ, ಸುಮಾ ಬಿ, ಎಸ್ ಲಕ್ಷ್ಮಿ ರವರನ್ನು ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ 6 ಮುಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಕ್ರೀಡೆಯಲ್ಲಿ ಸಾಧನೆ ಮಾಡಿದ ಯೂನಿತ್ ಹಾಗೂ ಕರಾಟೆಯಲ್ಲಿ ಸಾಧನೆ ಮಾಡಿದ ಮೊಹಮ್ಮದ್ ಇಲ್ತಿಯಾಜ್ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುನಂದ, ಸಂಘದ ನಿರ್ದೇಶಕರಾದ ಮಮತಾ, ಪ್ರೇಮ, ನಳಿನಿ, ಗಿರಿಜಾ, ಕುಸುಮಾವತಿ, ರಾಜೀವಿ, ವರಿಜಾ, ಜಾನಕಿ, ಇಂದಿರಾ, ಪ್ರೇಮ ಸಿ., ಹಾಗೂ ಸದಸ್ಯರು ಭಾಗವಹಿಸಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಕೆ ವಾರ್ಷಿಕ ವರದಿ ವಾಚಿಸಿದರು.ನಿರ್ದೇಶಕರಾದ ಜಾನಕಿ ಸ್ವಾಗತಿಸಿ, ಚೈತ್ರ ಎಂ.ಜಿ ವಂದಿಸಿದರು.

Exit mobile version