Site icon Suddi Belthangady

ಮಡಂತ್ಯಾರಿನಲ್ಲಿ ಭದ್ರಾ ಹೋಮ್ ಅಪ್ಲ್ಯಾನ್ಸ್ ಶುಭಾರಂಭ- ಗೃಹೋಪಯೋಗಿ ವಸ್ತು ಖರೀದಿಗೆ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ವ್ಯವಸ್ಥೆ: ಡಾ.ಎಂ.ಎನ್.ರಾಜೇಂದ್ರ ಕುಮಾರ್- ಸ್ಥಳದ ಕೊರತೆ ನೀಗಿಸಲು ಸಕಲ ವ್ಯವಸ್ಥೆ

ಮಡಂತ್ಯಾರು: ಬಂಟ್ವಾಳದಲ್ಲಿ ಎಲ್ಲರ ಮನೆ ಮಾತಾಗಿದ್ದ ಭದ್ರಾ ಗ್ಯಾಸ್, ಭದ್ರಾ ಹೋಮ್ ಅಪ್ಲ್ಯಾನ್ಸ್ ಇದೀಗ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಪರಿಶ್ರಮ ಕಟ್ಟಡದಲ್ಲಿ ಸೆ.23ರಂದು ಶುಭಾರಂಭಗೊಂಡಿತು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಂಸ್ಥೆ ಉದ್ಘಾಟಿಸಿ ಶುಭ ಹಾರೈಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು ಪುತ್ತೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಪೂವಾಜೆ ಕುಶಾಲಪ್ಪ ಗೌಡ, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನಿತ್ ಕುಮಾರ್, ಮಡಂತ್ಯಾರು ಗ್ರಾಮ ಪಂಚಾಯತು ಅಧ್ಯಕ್ಷೆ ರೂಪ, ಶ್ರೀ ಕ್ಷೇತ್ರ ಪಾರೆಂಕಿ ಪ್ರಧಾನ ಅರ್ಚಕ ಪೇಜಾವರ ಟಿ.ವಿ ಶ್ರೀಧರ್ ರಾವ್, ಮೊಹಿಯುದ್ದೀನ್ ಜಾಮಿಯಾ ಮಸಿದ್, ಕೊಲ್ಪೆದಬೈಲು ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು
ವಂದನೀಯ ಸ್ವಾಮಿ ಡಾ.ಸ್ಟ್ಯಾನಿ ಗೋವಿಯಸ್, ಬಂಟ್ವಾಳ ರೋಟರಿ ಕ್ಲಬ್ ನ ಪ್ರಕಾಶ್ ಕಾರಂತ್ ಮಾಲಕರ ಮಾತೃಶ್ರೀ ಆಶಾಲತಾ ಬಾಯ್, ಪತ್ನಿ ಮೇಘಾ ಎಂ., ಪುತ್ರ ಮಧ್ವ ಆಚಾರ್ಯ, ಪುತ್ರಿ ಮಾಲ್ಸಿ, ಪದ್ಮಶೇಖರ್ ಜೈನ್, ತುಂಗಪ್ಪ ಬಂಗೇರ, ಬಾಲಕೃಷ್ಣ ಅಂಚನ್, ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷರು, ಸದಸ್ಯರು, ಸಂಜೀವ ಶೆಟ್ಟಿ ಮೊಗೆರೋಡಿ, ಸಂಘದ ಅಧ್ಯಕ್ಷ ಕೆ.ಅರವಿಂದ ಜೈನ್, ಉಪಾಧ್ಯಕ್ಷೆ ಧನಲಕ್ಷ್ಮೀ,
ಮುಖ್ಯಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿ’ಸೋಜ, ಆಡಳಿತ ಮಂಡಳಿ ನಿರ್ದೇಶಕರುಗಳಾದ ಕುಮಾರ್ ನಾಯ್ಕ್, ಅಬ್ದುಲ್ ರಹಿಮಾನ್ ಪಡ್ಪು, ಬಿ.ಪದ್ಮನಾಭ ಸಾಲಿಯಾನ್, ಎಚ್.ಧರ್ಣಪ್ಪ ಗೌಡ, ಕಿಶೋರ್ ಕುಮಾರ್ ಶೆಟ್ಟಿ, ಜೋಯಲ್ ಗಾಡ್ ಫ್ರೀ ಮೆಂಡೋನ್ಸಾ, ತುಳಸಿ ಜಿ. ಪೂಜಾರಿ, ಉಷಾಲತಾ, ರಮೇಶ್, ಸಿರಾಜುದ್ದೀನ್ ವಲಯ ಮೇಲ್ವಿಚಾರಕ ಉಪಸ್ಥಿತರಿದ್ದರು.

ಮೌನೇಶ್ ವಿಶ್ವಕರ್ಮ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

ಬಂಟ್ವಾಳ ಅಗ್ನಿ ಶಾಮಕ ಠಾಣಾ ಎದುರು ಹಲವಾರು ವರ್ಷ ದಿಂದ ಕಾರ್ಯಚರಿಸುತ್ತ ಬಂದಿರುವ ಭದ್ರಾ ಗ್ಯಾಸ್ ಮತ್ತು ಹೋಮ್ ಅಪ್ಲ್ಯಾನ್ಸ್, ಬಿ.ಸಿ.ರೋಡ್ ಬಸ್ಟ್ಯಾಂಡ್, ಸೋಮಯಾಜಿ ಆಸ್ಪತ್ರೆ ಎದುರುನಲ್ಲಿಯು ತನ್ನ ಶಾಖೆಯನ್ನು ಹೊಂದಿದ್ದು, ಇದೀಗ ಮಡಂತ್ಯಾರಿನಲ್ಲಿ 3ನೇ ಶಾಖೆ ಕಾರ್ಯಾಚರಿಸಲಿದೆ.

ಆಡಳಿತ ನಿರ್ದೇಶಕರಾದ ಮಂಜುನಾಥ ಆಚಾರ್ಯ ಮತ್ತು ಮೇಘಾ ಎಂ. ಆಚಾರ್ಯ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲ್ಲಿ ಎಲ್ಲಾ ರೀತಿಯ ಮನೆಗೆ ಗ್ರಹ ಉತ್ಪನ್ನ ವಸ್ತುಗಳಾದ ಟಿ.ವಿ., ಫ್ರಿಡ್ಜ್, ವಾಷಿಂಗ್ ಮೆಷಿನ್, ಎ.ಸಿ., ಮಿಕ್ಸಿ, ಗ್ರೈಂಡರ್, ಎಲ್ಲ ಹೋಮ್ ಅಪ್ಲ್ಯಾನ್ಸ್ ಉತ್ಪನ್ನಗಳು, ಫರ್ನಿಚರ್ ಲಭ್ಯವಿದೆ ಎಂದು ತಿಳಿಸಿದರು.

Exit mobile version