Site icon Suddi Belthangady

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.147 ಕೋಟಿ ವ್ಯವಹಾರ, ರೂ.65 ಲಕ್ಷ ನಿವ್ವಳ ಲಾಭ, 15% ಡಿವಿಡೆಂಡ್ ಘೋಷಣೆ

ಮಚ್ಚಿನ: ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ 63ನೇ ಮಹಾಸಭೆಯು ಸೆ.23ರಂದು ಸಂಘದ ಸಭಾಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 2023-24ರ ಸಾಲಿನಲ್ಲಿ ರೂ.147 ಕೋಟಿ ವ್ಯವಹಾರ ನಡೆಸಿ, ರೂ.67 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.

ಸಂಘದ ಉಪಾಧ್ಯಕ್ಷ ಮೋಹನ್ ಗೌಡ ಪಿ., ನಿರ್ದೇಶಕರುಗಳಾದ ಶಿವರಾಮ, ಗಣೇಶ್ ಅರ್ಕಜೆ, ಶ್ರೀಧರ್ ಪೂಜಾರಿ ಕೆ., ಸುಜಾತ ಪಿ ಸಾಲ್ಯಾನ್, ಬೇಬಿ, ರಾಜೇಶ್ ನಾಯ್ಕ, ಆನಂದ, ಚಿತ್ತರಂಜನ್ ಕೆ., ದೀಕ್ಷಿತ್, ಮಡಂತ್ಯಾರು ಶಾಖೆ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕಿ ಸೌಮ್ಯ, ವಲಯ ಮೇಲ್ವಿಚಾರಕ ಸಿರಾಜುದ್ಧೀನ್, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಲಯ ಮೇಲ್ವಿಚಾರಕ ಸುದರ್ಶನ್, ಸಂಘದ ಸದಸ್ಯರು ಮತ್ತು ಸಿಬ್ಬಂದಿಗಳು ಸಭೆಯಲ್ಲಿ  ಉಪಸ್ಥಿತರಿದ್ದರು.

ನಿರ್ದೇಶಕ ಶಿವರಾಮ ಬಂಗೇರ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಮೋಹನ್ ಗೌಡ ಪಿ. ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಕ್ಷಣ್ ವಾರ್ಷಿಕ ವರದಿ ಮಂಡಿಸಿದರು.

ಮ್ಯಾಕ್ಷಿಮ್ ಅಲ್ಬುಕರ್ಕ್, ಪದ್ಮನಭಾ ಶೆಟ್ಟಿ ಅರ್ಕಜೆ, ಪ್ರಮೋದ್ ಕುಮಾರ್, ಸದಾಶಿವ ಹೆಗ್ಡೆ, ಹರ್ಷ ನಾರಾಯಣ, ಚಂದ್ರಕಾಂತ್ ನಿಡ್ದಾಜೆ, ಮಹೇಶ್ ಆಚಾರ್ಯ, ಸುಧೀರ್ ಕೊರಬೆಟ್ಟು, ನಾರಾಯಣ ಪೂಜಾರಿ ಹೊಸ ಮನೆ, ಕೇಶವ, ಸಂಘದ ಅಭಿವೃದ್ಧಿಗಾಗಿ ಸಲಹೆ ಸೂಚನೆ ನೀಡಿ ಚರ್ಚೆಯಲ್ಲಿ ಪಾಲ್ಗೊಂಡರು. ಸಿಬ್ಬಂದಿಗಳಾದ ಗಣೇಶ್, ವನಿತಾ, ಕಿಶೋರ್, ಎ ಕಲಾತ ಪಿ. ಶೆಟ್ಟಿ, ಸೌಜನ್ಯ ಎನ್.ಬಿ., ಯತೀಶ್ ಕೆ.ಎಸ್. ಸಹಕರಿಸಿದರು.

Exit mobile version