Site icon Suddi Belthangady

ಕೊಕ್ಕಡ: ಶಿಶಿಲ-ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದವರಿಂದ ಸರಕಾರಿ ಆಸ್ಪತ್ರೆಯ ಬಾವಿ ಸ್ವಚ್ಛತೆ ಕಾರ್ಯ

ಕೊಕ್ಕಡ: ಶಿಶಿಲ-ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದವರಿಂದ ಸರಕಾರಿ ಆಸ್ಪತ್ರೆಯ ಬಾವಿಯ ಸ್ವಚ್ಛತೆ ಕಾರ್ಯವನ್ನು ಸೆ.21ರಂದು ನೆರವೇರಿಸಿದರು.

ಕೊಕ್ಕಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರವರ ಕರೆ ಮೇರೆಗೆ ಶೌರ್ಯ ವಿಪತ್ತು ತಂಡದವರು ಈ ಕಾರ್ಯವನ್ನು ಮಾಡಿದ್ದು ಬಾವಿಯಲ್ಲಿ ವಿಪರೀತ ತ್ಯಾಜ್ಯ ವಸ್ತುಗಳು ತುಂಬಿಕೊಂಡಿದ್ದು ನೀರು ಕಲುಷಿತಗೊಂಡು ಉಪಯೋಗಿಸಲು ಯೋಗ್ಯವಲ್ಲದ ರೀತಿಯಲ್ಲಿತ್ತು. ಒಂದು ಟನ್ ಗಿಂತಲೂ ಅಧಿಕಾವಾಗಿ ಬಾವಿಯಲ್ಲಿ ತ್ಯಾಜ್ಯ ಸಂಗ್ರಹವಾಗಿತ್ತು ಎಂದು ಶೌರ್ಯ ವಿಪತ್ತು ತಂಡದವರು ತಿಳಿಸಿದ್ದರು.

ಸ್ವಚ್ಛತಾ ಕಾರ್ಯದಲ್ಲಿ ವಿಪತ್ತು ತಂಡದ ಕೃಷ್ಣಪ್ಪ ಗೌಡ, ರಮೇಶ್ ಬೈರಘಟ್ಟ, ಕಿರಣ್ ಸಂಕೇಶ, ಅವಿನಾಶ್ ಭಿಡೆ, ಮಾಧವ ಪೂಜಾರಿ, ರಶ್ಮಿತಾ ಭಾಗವಹಿಸಿದ್ದು. ಪಂಚಾಯತ್ ಅಭಿವೃದ್ದಿ ಅಧಿಕಾರಿ ದೀಪಕ್ ರಾಜ್, ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿ ಡಾ.ಪ್ರಕಾಶ್ ಮತ್ತು ಡಾ.ತುಷಾರಾ ಉಪಸ್ಥಿತರಿದ್ದು ಕಾರ್ಯಾಚರಣೆಗೆ ಸಹಕರಿಸಿದರು.

Exit mobile version