Site icon Suddi Belthangady

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವದ ಸವಿ ನೆನಪಿನ ಕೇಂದ್ರ ಕಚೇರಿಯ ನೂತನ ಕಟ್ಟಡ “ಪರಿಶ್ರಮ” ಲೋಕಾರ್ಪಣೆ- ರೂ 12 ಲಕ್ಷ ಅನುದಾನ, ದ.ಕ. ಜಿಲ್ಲೆಯ ಸಹಕಾರಿ ಸಂಘಗಳು ಬಲಿಷ್ಠ: ಡಾ.ಎನ್.ಎಂ.ರಾಜೇಂದ್ರ ಕುಮಾರ್

ಮಡಂತ್ಯಾರು: ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವದ ಸವಿ ನೆನಪಿನ ಕೇಂದ್ರ ಕಚೇರಿಯ ನೂತನ ಕಟ್ಟಡ “ಪರಿಶ್ರಮ” ಉದ್ಘಾಟನಾ ಸಮಾರಂಭವು ಸೆ.23ರಂದು ನಡೆಯಿತು.ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆ ಮತ್ತು ಬ್ಯಾಂಕಿಂಗ್ ವಿಭಾಗ ಉದ್ಘಾಟನೆಯನ್ನು ‘ಸಹಕಾರ ರತ್ನ’ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು, ಅಧ್ಯಕ್ಷರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ನಿರ್ದೇಶಕರು, ಇಪ್ಕೋ ನವದೆಹಲಿ ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಮ್ಯಾನೇಜಿಂಗ್ ಟ್ರಸ್ಟಿ, ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರಿನ ರಾಜೇಂದ್ರ ಕುಮಾರ್ ನೆರವೇರಿಸಿದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು ಪುತ್ತೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಪೂವಾಜೆ ಕುಶಾಲಪ್ಪ ಗೌಡ, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಮಡಂತ್ಯಾರು ಗ್ರಾಮ ಪಂಚಾಯತು ಅಧ್ಯಕ್ಷೆ ರೂಪ, ಶ್ರೀ ಕ್ಷೇತ್ರ ಪಾರೆಂಕಿ ಪ್ರಧಾನ ಅರ್ಚಕ ಪೇಜಾವರ ಟಿ.ವಿ ಶ್ರೀಧರ್ ರಾವ್, ಮೊಹಿಯುದ್ದೀನ್ ಜಾಮಿಯಾ ಮಸಿದ್, ಕೊಲ್ಪೆದಬೈಲು ಅಧ್ಯಕ್ಷ
ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಸ್ವಾಮಿ ಡಾ.ಸ್ಟ್ಯಾನಿ ಗೋವಿಯಸ್, ಸಂಜೀವ ಶೆಟ್ಟಿ ಮೊಗೆರೋಡಿ, ಸಂಘದ ಅಧ್ಯಕ್ಷ ಕೆ.ಅರವಿಂದ ಜೈನ್, ಉಪಾಧ್ಯಕ್ಷೆ ಧನಲಕ್ಷ್ಮೀ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿ’ಸೋಜ, ಆಡಳಿತ ಮಂಡಳಿ ನಿರ್ದೇಶಕರುಗಳಾದ ಕುಮಾರ್ ನಾಯ್ಕ್, ಅಬ್ದುಲ್ ರಹಿಮಾನ್ ಪಡ್ಪು, ಬಿ. ಪದ್ಮನಾಭ ಸಾಲಿಯಾನ್, ಎಚ್.ಧರ್ಣಪ್ಪ ಗೌಡ, ಕಿಶೋರ್ ಕುಮಾರ್ ಶೆಟ್ಟಿ, ಜೋಯಲ್ ಗಾಡ್ ಫ್ರೀ ಮೆಂಡೋನ್ಸಾ, ತುಳಸಿ ಜಿ.ಪೂಜಾರಿ, ಉಷಾಲತಾ, ರಮೇಶ್, ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮ ಆರಂಭದವರೆಗೆ ‘ನಾದ ವೈವಿಧ್ಯ’ ಖ್ಯಾತ ಅಂತಾರಾಷ್ಟ್ರೀಯ ಕಲಾವಿದ ಮತ್ತು ವಾದಕ ಹೊನ್ನಪ್ಪ ದೇವಾಡಿಗ ಬಳ್ಳಮಂಜ ಹಾಗೂ ತಂಡದವರಿಂದ ಸ್ಮರಣ ಸಂಚಿಕೆ ಮುಖಪುಟ ಪರಿಶ್ರಮ ಬಿಡುಗಡೆ, 19ನೇ ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪುರಸ್ಕೃತ, ವಿವಿಧ ಸಾಧನೆಗೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ರವರಿಗೆ ಸನ್ಮಾನ ನಡೆಸಲಾಯಿತು.

ಅಧ್ಯಕ್ಷ ಅರವಿಂದ ಜೈನ್ ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿಸೋಜಾ ವಂದಿಸಿದರು. ಶಿಕ್ಷಕ ಧರಣೇಂದ್ರ ಕೆ.ಜೈನ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಂಜೀವ ಶೆಟ್ಟಿ ಮೊಗೆರೋಡಿ, ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಪುಷ್ಪರಾಜ್ ಹೆಗ್ಡೆಯವರಿಗೆ ಮತ್ತು ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಕೃಷ್ಣ ಹೆಬ್ಬಾರ್, ಡೀಕಯ್ಯ ಮೂಲ್ಯ, ತುಳಸಿ ಪಿ ಆಚಾರ್, ಮಂಗಳೂರು ನೂತನ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಪೂವಾಜೆ ಕುಶಾಲಪ್ಪ ಗೌಡ ಇವರನ್ನು ಸನ್ಮಾನಿಸಲಾಹಿತು. ಕಟ್ಟಡಕ್ಕೆ ಹೆಸರು ಸೂಚಿಸಿದ ಪೂರ್ಣಿಮ ಎಂ. ಇವರಿಗೆ ಗುರುತಿಸಲಾಯಿತು.

Exit mobile version