Site icon Suddi Belthangady

ದೈವ ನರ್ತಕ ಸಮುದಾಯದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪೊಲೀಸರಿಗೆ ದೂರು

ಬೆಳ್ತಂಗಡಿ: ಕಲ್ಜಿಗ ಎಂಬ ಸಿನೆಮಾದಲ್ಲಿರುವ ದೈವ ಕೋಲದ ದೃಶ್ಯಗಳನ್ನು ನಲಿಕೆ ಸಮುದಾಯವರು ಮಾಡಿದ್ದಾರೆ ಎಂದು ಚಿತ್ರ ತಂಡ ಸುಳ್ಳು ಹೇಳಿರುವುದನ್ನು ಖಂಡಿಸಿ ಹಾಗೂ ದೈವನರ್ತಕರನ್ನು ಕಮೆಂಟ್ ಮೂಲಕ ಅಶ್ಲೀಲವಾಗಿ ನಿಂದಿಸಿದ ವ್ಯಕ್ತಿಯ ವಿರುದ್ಧ ದಲಿತ ದೌರ್ಜನ್ಯ‌ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ನಲಿಕೆ ಸಮಾಜ ಬಾಂಧವರು ಸೆ.22ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಓಡಿಳ್ನಾಳ, ಸಂಘದ ಸದಸ್ಯ ಸಂತೋಷ್ ನಾರಾವಿ, ಮಾಜಿ ಅಧ್ಯಕ್ಷ ಸೇಸಪ್ಪ ಅಳದಂಗಡಿ, ಹಿರಿಯ ದೈವ ನರ್ತಕರಾದ ವೀರಪ್ಪ ಈದು, ಗಿರಿಯಪ್ಪ ಎಡ್ತೂರು, ಗೋಪಾಲ ಕೇಲ, ನಾರಾಯಣ ವೇಣೂರು, ಬಾಬು ಪೊಸಲಾಯ, ಕಾಂತಪ್ಪ ಪೆರಿಂಜೆ, ರಮೇಶ್‌ ಪೆರಿಂಜೆ, ಪ್ರಮುಖರಾದ ಗಣೇಶ್ ಕೋಟ್ಯಾನ್ ಚಾರ್ಮಾಡಿ, ಹರೀಶ್ ನಾವೂರು, ಶೇಖರ್ ವಾಲ್ಪಾಡಿ, ಸಂಪತ್ ವಾಲ್ಪಾಡಿ, ನಾಗೇಶ್ ಉಡುಪಿ, ರವಿ ಎಂ.ಎಲ್ ಮುಂಡಾಜೆ, ಜಯಂತ ಈದು ಮತ್ತು ನಲಿಕೆ ಸಮಾಜ ಬಂಧುಗಳು ಉಪಸ್ಥಿತರಿದ್ದರು.

Exit mobile version