ತೆಕ್ಕಾರು: ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳೆದ ಆರ್ಥಿಕ ವರ್ಷದಲ್ಲಿ 102 ಕೋಟಿ ರೂ. ವ್ಯವಹಾರ ನಡೆಸಿ, 32 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡಲಾಗುವುದು ಎಂದು ನಿದೇರ್ಶಕ ಶಿವಪ್ಪ ಪೂಜಾರಿ ಹೇಳಿದರು.
ಸೆ.21ರಂದು ತೆಕ್ಕಾರು ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿರ್ದೇಶಕರಾದ ಹುಸೈನ್, ಅಬ್ದುಲ್ ರಹಿಮಾನ್, ಅಬ್ದುಲ್ ಮುನೀರ್, ಸಂಗೀತಾ, ರವಿ ಹಾಗೂ ಜನಾರ್ದನ ಪೂಜಾರಿ ಮತ್ತು ವಲಯ ಮೇಲ್ವಿಚಾರಕ ಸಿರಾಜುದ್ದಿನ್ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಅಡಪ ವಾರ್ಷಿಕ ವರದಿಯ ಮಂಡಿಸಿದರು. ಗುಮಾಸ್ತೆ ಶಾಹಿದಾ ಬಾನು ಸ್ವಾಗತಿಸಿ, ವೃತ್ತಿ ಪರ ನಿರ್ದೇಶಕರಾದ ಇನಾಸ್ ರೋಡ್ರಿಗಸ್ ವಂದಿಸಿದರು. ದೇವಿಪ್ರಸಾದ್ ನಿರೂಪಿಸಿದರು.ಸಿಬ್ಬಂದಿಗಳಾದ ಪ್ರೇಮಾ, ಉಸ್ಮಾನ್ ಹಾಗೂ ನವೀಶ ಸಹಕರಿಸಿದರು.