ಉಜಿರೆ: ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಉಪಾಧ್ಯಕ್ಷೆ ಪ್ರೇಮಾ ಆನಂದ ಅವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಸೆ. 21 ರಂದು ಜರಗಿತು.
ಸಂಘವು ವರದಿ ವರ್ಷದಲ್ಲಿ 1,02,98,315 ರೂ. ಲಾಭಗಳಿಸಿದ್ದು ಸದಸ್ಯರಿಗೆ ಶೇ.12 ಡಿವಿಡೆಂಟ್ ನೀಡಲು ನಿರ್ಣಯಿಸಲಾಯಿತು. 3006 ಸದಸ್ಯರಿಂದ 1.54 ಕೋಟಿ ರೂ. ಪಾಲು ಬಂಡವಾಳ ಸಂಗ್ರಹಿಸಿದ್ದು, 23.66 ಕೋಟಿ ರೂ. ಠೇವಣಿ ಹೊಂದಿದೆ.ಒಟ್ಟು 382 ಕೋಟಿ ರೂ. ವಾರ್ಷಿಕ ವ್ಯವಹಾರ ನಡೆಸಲಾಗಿದೆ ಎಂದರು.
ಸಂಘದ ನಿರ್ದೇಶಕರಾದ ಶ್ರೀನಿವಾಸ ಗೌಡ ಮಧುರ, ಶ್ರೀಧರ ಪೂಜಾರಿ, ಸೌಮ್ಯಲತಾ, ಅಶ್ವತ್ ಇಎಸ್., ಅರುಣ ಕುಮಾರ್, ಎಂ. ಗೋಪಾಲಕೃಷ್ಣ ಶೆಟ್ಟಿ, ಅಣ್ಣು ನಾಯ್ಕ, ಸಾದು, ಪುಷ್ಪಾವತಿ ಆರ್. ಶೆಟ್ಟಿ ಉಪಸ್ಥಿತರಿದ್ದರು.
ನಿರ್ದೇಶಕ ಸದಾಶಿವ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸರಸ್ವತಿ ಸಿ.ರೈ ವರದಿ ವಾಚಿಸಿದರು.ಸಿಬ್ಬಂದಿ ಮೋಹನ ಗೌಡ ವಂದಿಸಿದರು.