Site icon Suddi Belthangady

ಬೆಳ್ತಂಗಡಿ: ಹಳೆಕೋಟೆ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ- 58.35 ಕೋಟಿಗೂ ಅಧಿಕ ವ್ಯವಹಾರ, 44,45,999 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ 10% ಡಿವಿಡೆಂಡ್

ಬೆಳ್ತಂಗಡಿ: ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಹಳೆಕೋಟೆ ಇದರ ವಾರ್ಷಿಕ ಮಹಾ ಸಭೆ ಸೆಪ್ಟೆಂಬರ್ 22ರಂದು ಸಂಘದ ಸಭಾ ಭವನದಲ್ಲಿ ನಡೆಯಿತು.

ಸೊಸೈಟಿ ಅಧ್ಯಕ್ಷ ಹೆಚ್ ಪದ್ಮಗೌಡ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘವು 58,35,33,301 ರೂಪಾಯಿ ಒಟ್ಟು ವ್ಯವಹಾರ ಮಾಡಿ 44,45,999 ಲಾಭ ಕಂಡಿದೆ.ಸದಸ್ಯರಿಗೆ 10% ಡಿವಿಡೆಂಡ್ ನೀಡುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ,
ನಿರ್ದೇಶಕರಾದ ಗೋಪಾಲಕೃಷ್ಣ ಬಿ ಗುಲ್ಲೋಡಿ, ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ದೇವಸ, ಗೋಪಾಲಕೃಷ್ಣ ಜಿ ಕೆ,ಮಾಧವ ಗೌಡ ಬೆಳ್ತಂಗಡಿ, ಸುರೇಶ್ ಬಿ ಕೌಡಂಗೆ, ಯಶವಂತ ಬಿ.ಟಿ ಬೆಳಾಲು, ಸುನೀಲ್ ಅಣವು, ಪುರಂದರ ಗೌಡ ಎನ್ ಮೊಗ್ರು, ಶ್ರೀನಾಥ್ ಕೆ ಎಮ್ ನಡ,ಸೋಮೆ ಗೌಡ,ಉಷಾದೇವಿ ಕಿನ್ಯಾಜೆ, ಭವಾನಿ ಕೆ ಗೌಡ ಮೂಡಾಯೂರು,
ಮುಖ್ಯಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ಟಿ ಎಸ್ ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಜಯಶ್ರೀ ಮತ್ತು ಸಿಂಚನ, ಸೊಸೈಟಿ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿ, ಭವಾನಿ ಕೆ ಗೌಡ ಧನ್ಯವಾದಿಸಿ, ಶಾಖಾ ಪ್ರಭಂದಕ ಉಮೇಶ್ ಎಂ ನಿರೂಪಣೆ ನೆರವೇರಿಸಿದರು. ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಧನಂಜಯ ಕುಮಾರ್ ಟಿ ಎಸ್ ಮಂಡಿಸಿದರು.ಸಿಬ್ಬಂದಿ ವರ್ಗ ಕಾರ್ಯಕ್ರಮಕ್ಕೆ ಸಹಕರಿಸಿದರು.

Exit mobile version