ಬೆಳ್ತಂಗಡಿ: ಮಾನಸಿಕ ಕುಂಠಿತ ಮತ್ತು ದೈಹಿಕ ಸಂಬಂಧಿತ ವಿಕಲಾಂಗತೆ ಹೊಂದಿರುವ ಮಕ್ಕಳು ಮತ್ತು ಯುವಕರಿಗೆ ಅತ್ಯಂತ ಸೂಕ್ತವಾದ ವಿಶೇಷ ಶಿಕ್ಷಣ ಸೇವೆಗಳನ್ನು ನೀಡುತ್ತಿರುವ ದಯಾ ವಿಶೇಷ ಚೇತನ ಶಾಲೆಗೆ RPC ವತಿಯಿಂದ ಕಲಿಕಾ ಸಾಮಾಗ್ರಿಗಳಾದ ಪುಸ್ತಕ, ಪೆನ್, ಸ್ಕೇಲ್, ಲ್ಯಾಮಿನೇಟೆಡ್ ಚಾರ್ಟ್, ಕಲರ್ ಪೆನ್ಸಿಲ್ ಹಾಗೂ ವಿವಿಧ ಆಟೋಪಕರಣಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಯಾರಿಸಿದಂತಹ ಹ್ಯಾಂಡ್ ಮೇಡ್ ವಸ್ತುಗಳನ್ನು ಆರ್‌ಪಿಸಿ ಸಂಸ್ಥೆಯ ಸದಸ್ಯರು ಖರೀದಿಸಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕ ಫಾದರ್ ವಿನೋದ್ ಮಸ್ಕ್ಯಾರೆನ್ಹಸ್, ಮುಖ್ಯ ಶಿಕ್ಷಕಿ ದಿವ್ಯ ಟಿ.ವಿ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಮತ್ತು ಆರ್ ಪಿ ಸಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.