Site icon Suddi Belthangady

ಬಂಗಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ, ಹಿರಿಯ ಪ್ರಾಥಮಿಕ ವಿಭಾಗವು ಸಮಗ್ರ ಪ್ರಶಸ್ತಿಗೆ ಆಯ್ಕೆ

ಬೆದ್ರಬೆಟ್ಟು: ಸೆ.20ರಂದು ನಡೆದ ಬಂಗಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟು ಇಲ್ಲಿನ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿರುವರು.

ಕಿರಿಯ ಪ್ರಾಥಮಿಕ ವಿಭಾಗ: ಕಥೆ ಹೇಳುವುದು ಆದ್ಯ ಮೂರನೇ ತರಗತಿ ದ್ವಿತೀಯ ಸ್ಥಾನ, ಧಾರ್ಮಿಕ ಪಠಣ ಅರೇಬಿಕ್ ಮೊಹಮ್ಮದ್ ಅಶಾಜ್ 4ನೇ ತರಗತಿ ದ್ವಿತೀಯ ಸ್ಥಾನ, ಛದ್ಮವೇಷ ಸಾನಿಕ 3ನೇ ತರಗತಿ ತೃತೀಯ ಸ್ಥಾನ.

ಹಿರಿಯ ಪ್ರಾಥಮಿಕ ವಿಭಾಗ: ಕನ್ನಡ ಕಂಠಪಾಠ ಪ್ರತ್ಯುಶ 6ನೇ ತರಗತಿ ಪ್ರಥಮ ಸ್ಥಾನ, ಇಂಗ್ಲಿಷ್ ಕಂಠಪಾಠ ಕ್ಲೇಯರ್ ಸಜಿ 6ನೇ ತರಗತಿ ದ್ವಿತೀಯ ಸ್ಥಾನ, ಹಿಂದಿ ಕಂಠಪಾಠ ಫಾತಿಮತ್ ನುಸ್ರ ಏಳನೇ ತರಗತಿ ತೃತೀಯ ಸ್ಥಾನ, ಅಭಿನಯ ಗೀತೆ ಆತ್ಮಿಕ ಬಿ ಆರ್ 6ನೇ ತರಗತಿ ದ್ವಿತೀಯ ಸ್ಥಾನ, ಕಥೆ ಹೇಳುವುದು ಶಮಿತ್ 6ನೇ ತರಗತಿ ತೃತೀಯ ಸ್ಥಾನ, ಧಾರ್ಮಿಕ ಪಠಣ ಫಾತಿಮತ್ ಅಫ್ನ ಏಳನೇ ತರಗತಿ ದ್ವಿತೀಯ ಸ್ಥಾನ, ಕ್ಲೇ ಮಾಡಲಿಂಗ್ ಸನ್ವಿತ್ ಆರನೇ ತರಗತಿ ತೃತೀಯ ಸ್ಥಾನ , ಭಕ್ತಿ ಗೀತೆ ಸುಜನ್ ಕುಮಾರ್ 7ನೇ ತರಗತಿ ಪ್ರಥಮ ಸ್ಥಾನ, ಕವನ ವಾಚನ ಪ್ರೇಕ್ಷ ಕೆ ಎಲ್ 7ನೇ ತರಗತಿ ತೃತೀಯ ಸ್ಥಾನ.

ಹೀಗೆ ಹಲವು ಬಹುಮಾನಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಶಾಲೆಯು ತನ್ನದಾಗಿಸಿಕೊಂಡು, ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Exit mobile version