ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸೆ.20ರಂದು ಪುಂಜಾಲಕಟ್ಟೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಏರ್ಪಡಿಸಲಾಗಿತ್ತು.ಈ ಸ್ಪರ್ಧೆಗಳಲ್ಲಿ ಸರಿ ಸುಮಾರು 30ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಪ್ಪಿನಂಗಡಿ ಮಹಾಮಂಡಲದ ಅಧ್ಯಕ್ಷ ಈಶ್ವರ ಪ್ರಸನ್ನ ಪರ್ನೆಕೊಡಿ ಇವರು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಪ್ರತಿಭಾ ಕಾರಂಜಿಯ ನೋಡಲ್ ಅಧಿಕಾರಿ ಚೇತನಾಕ್ಷಿ, ಕುಪ್ಪೆಟ್ಟಿ ಕ್ಲಸ್ಟರ್ CRP ವಾರಿಜಾ, ಪುತ್ತಿಲ ಕ್ಲಸ್ಟರ್ ನ CRP ದಿನೇಶ್, ಕರಾಯ ಕ್ಲಸ್ಟರ್ ನ CRP ಮೊಹಮ್ಮದ್ ಶರೀಫ್, ಕೋರಿಂಜ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಯೋಗೀಶ್ ಕಡ್ತಿಲ, ಉರುವಾಲು ಮಸೀದಿ ಅಧ್ಯಕ್ಷ ಹಮೀದ್, ಉರುವಾಲು ವಲಯಾಧ್ಯಕ್ಷ ಕೃಷ್ಣ ಭಟ್ ಇವರು ಉಪಸ್ಥಿತರಿದ್ದರು.
ಅನುದಾನಿತ ಶಾಲಾ ಮುಖ್ಯ ಶಿಕ್ಷಕ ಸಣ್ಣಪ್ಪ ಇವರು ಉಪಸ್ಥಿತರಿದ್ದರು. ಆಗಮಿಸಿದ ಸರ್ವ ಗಣ್ಯರನ್ನು, ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿ ಶಿಕ್ಷಕರನ್ನು ಶಾಲಾ ಮುಖ್ಯ ಶಿಕ್ಷಕಿ ಶೋಭಿತ ಕೆ ಆರ್ ಇವರು ಸ್ವಾಗತಿಸಿದರು.ಚೇತನಾಕ್ಷಿ ಇವರು ಪ್ರಾಸ್ತಾವಿಕ ನುಡಿ ನುಡಿದರು.ಸೇವಾ ಸಮಿತಿಯ ಸದಸ್ಯರಾದ ಸತ್ಯ ಶಂಕರ್ ಭಟ್ ಇವರು ಕಾರ್ಯಕ್ರಮದ ವ್ಯವಸ್ಥೆಗಳ ಬಗ್ಗೆ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು. ಸಹ ಶಿಕ್ಷಕಿ ಸೌಮ್ಯ ಧನ್ಯವಾದಗೈದರು.ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಮಂಜು ಗಣೇಶ್ ಹಾಗು ದಿವ್ಯಾ ಶೆಟ್ಟಿ ನೆರವೇರಿಸಿದರು.